ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಹಣ ನೀಡಿ: ಬಿಷ್ಟಪ್ಪ ಶಿಂದೆ

Published 25 ಮೇ 2023, 7:42 IST
Last Updated 25 ಮೇ 2023, 7:42 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ಮುಂಬೈ ಕರ್ನಾಟಕದ ಪ್ರದೇಶವನ್ನು ಹಿಂದಿನ ಬಿಜೆಪಿ ಸರ್ಕಾರ ಕಿತ್ತೂರು ಕರ್ನಾಟಕ ಪ್ರದೇಶ ಎಂದು ಘೋಷಣೆ ಮಾಡಿದ್ದು, ಈ ಪ್ರದೇಶದಲ್ಲಿ ಬರುವ ಏಳು ಜಿಲ್ಲೆಗಳ ಪ್ರಗತಿಗೆ ಅಭಿವೃದ್ಧಿ ಮಂಡಳಿ ರಚನೆ ಮಾಡಿ ₹ 3,000 ಬಿಡುಗಡೆ ಮಾಡಬೇಕು’ ಎಂದು ಕಾಂಗ್ರೆಸ್ ಮುಖಂಡ ಹಾಗೂ ಕುಲವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿಷ್ಟಪ್ಪ ಶಿಂಧೆ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಪ್ರಾದೇಶಿಕವಾರು ಮತ್ತು ವಾತಾವರಣದಲ್ಲಿ ವಿಭಿನ್ನವಾಗಿರುವ ಕಿತ್ತೂರು ಕರ್ನಾಟಕದ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅನೇಕ ಹಳ್ಳಿಗಳು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಅವುಗಳ ಅಭಿವೃದ್ಧಿ ಹೆಚ್ಚಿನ ಗಮನ ನೀಡಬೇಕು’ ಎಂದು ಹೇಳಿದರು.

‘ಕಿತ್ತೂರು ಪಟ್ಟಣದಲ್ಲಿ ಹಿಂದಿನ ಶಾಸಕ ಮಹಾಂತೇಶ ದೊಡ್ಡಗೌಡರ ಅವರು ಊರಿನಿಂದ ದೂರ 100 ಹಾಸಿಗೆ ಆಸ್ಪತ್ರೆ ನಿರ್ಮಿಸಲು ಹೊರಟಿದ್ದಾರೆ. ಅದನ್ನು ಊರ ಬಳಿ ತರಲು ನೂತನ ಶಾಸಕ ಬಾಬಾಸಾಹೇಬ ಪಾಟೀಲ ಪ್ರಯತ್ನಿಸಬೇಕು’ ಎಂದು ಮನವಿ ಮಾಡಿದರು.

‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಳಾಂತರ ಮಾಡಲು ಸರ್ಕಾರ ನಿರ್ಧಾರ ಮಾಡಿದಾಗ ಅದು ಕಿತ್ತೂರಿಗೆ ಬರಬೇಕಿತ್ತು. ಅದರ ಕಡೆಗೆ ಯಾರೂ ಗಮನ ಹರಿಸಲಿಲ್ಲ. ಕಡೆಯ ಪಕ್ಷ ಕೆಲವು ಅಧ್ಯಯನ ಪೀಠಗಳನ್ನಾದರೂ ಇಲ್ಲಿಗೆ ಸ್ಥಳಾಂತರ ಮಾಡುವ ಕೆಲಸವನ್ನು ಶಾಸಕರು ಕೈಗೊಳ್ಳಬೇಕು’ ಎಂದರು.

‘ಕಿತ್ತೂರು ತಾಲ್ಲೂಕು ರಚನೆಯಾಗಿ ಎಂಟು ವರ್ಷಗಳು ಕಳೆದಿದ್ದರೂ ಇನ್ನೂ ಮಹತ್ವದ ಕಚೇರಿಗಳು ತಾಲ್ಲೂಕು ಆಡಳಿತ ಸೌಧಕ್ಕೆ ಸ್ಥಳಾಂತರಗೊಂಡಿಲ್ಲ. ಅಗತ್ಯವಿರುವ ಕಚೇರಿಗಳ ಅನುಷ್ಠಾನಕ್ಕೆ ಶಾಸಕರು ಪ್ರಯತ್ನಿಸಬೇಕು’ ಎಂದರು.

ಮಹಾಂತೇಶ ಎಮ್ಮಿ, ವಿಜಯ ಅಂಕಲಗಿಮಠ, ಸುರೇಶ ತೋಪಗಾಂವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT