ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿವೃತ್ತ ಸೈನಿಕರಿಂದ ಸೇವೆ ಶ್ಲಾಘನೀಯ’

Last Updated 23 ಸೆಪ್ಟೆಂಬರ್ 2021, 13:54 IST
ಅಕ್ಷರ ಗಾತ್ರ

ತೆಲಸಂಗ: ‘ಗ್ರಾಮದ ನಿವೃತ್ತ ಸೈನಿಕರು ಒಗ್ಗಟ್ಟಿನ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ’ ಎಂದು ಗ್ರಾಮ ಲೆಕ್ಕಾಧಿಕಾರಿಯೂ ಆಗಿರುವ ನಿವೃತ್ತ ಸೈನಿಕ ಬಿ.ಜಿ. ಇರಕಾರ ಹೇಳಿದರು.

ಗ್ರಾಮದಲ್ಲಿ ನಿವೃತ್ತ ಸೈನಿಕರ ಸಂಘದ ಕಾರ್ಯಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಒಗ್ಗಟ್ಟಿನಿಂದ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇಲ್ಲಿನ ನಿವೃತ್ತ ಸೈನಿಕರ ಸಂಘಟನೆಯೇ ಸಾಕ್ಷಿಯಾಗಿದೆ. ದೇಶ ಸೇವೆಯ ನಂತರ ಗ್ರಾಮದ ಒಳತಿಗೆ ಒಗ್ಗಟ್ಟಿನ ಮಂತ್ರ ಜಪಿಸಿರುವುದು ಮಾದರಿಯಾಗಿದೆ’ ಎಂದರು.

ರೈತ ಮುಖಂಡ ಸುಭಾಸ್ ಮೋರೆ ಮಾತನಾಡಿ, ‘ರೈತ ಮತ್ತು ಸೈನಿಕ ದೇಶದ ಬೆನ್ನೆಲಬು. ಅವರನ್ನು ಗೌರವಿಸುವುದು ಎಲ್ಲರ ಧರ್ಮವಾಗಿದೆ’ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಲಾಸ ಮೋರೆ, ಪಿಡಿಒ ಬೀರಪ್ಪ ಕಡಗಂಚಿ, ನಿವೃತ್ತ ಸೈನಿಕರಾದ ಮಹಾದೇವ ಬಾಣಿ, ಗಂಗಪ್ಪ ಗಂಗಾಧರ, ಸಾಬು ಅರಟಾಳ, ಪಾಂಡುರಂಗ ಶಿಂಧೆ, ಸುಭಾಸ್ ಖೊಬ್ರಿ, ಗ್ಯಾನು ನಲವಡೆ, ಬಸವರಾಜ ರೊಟ್ಟಿ, ವಿಲಾಸ್ ಕಾಂಬಳೆ, ಚಂದು ಬಿಜ್ಜರಗಿ, ಬಸಲಿಂಗ ಗಂಗಾಧರ, ಅರವಿಂದ ಉಂಡೋಡಿ, ಈಶ್ವರ ಉಂಡೋಡಿ, ಗುಂಡು ಪವಾರ, ರಾಮು ನಿಡೋಣಿ, ಅಪ್ಪು ಬಿಜ್ಜರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT