ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರ ಸಂಘದ ಚುನಾವಣೆ

Last Updated 13 ಜೂನ್ 2019, 16:25 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನಿರ್ದೇಶಕರ ಸ್ಥಾನಗಳಿಗೆ ಗುರುವಾರ ಶಾಂತಿಯುತವಾಗಿ ಚುನಾವಣೆ ನಡೆಯಿತು.

ನಗರ ಒಳಗೊಂಡಂತೆ ಜಿಲ್ಲೆಯಲ್ಲಿ 62 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಈ ಪೈಕಿ 41 ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಉಳಿದ 21 ಸ್ಥಾನಗಳಿಗೆ ಒಟ್ಟು 35 ಮಂದಿ ಕಣದಲ್ಲಿದ್ದರು.

5,500 ನೌಕರರು ಮತದಾನದ ಹಕ್ಕು ಹೊಂದಿದ್ದರು. ಜಿಲ್ಲಾಧಿಕಾರಿ ಕಚೇರಿ ಬಳಿಯ ಸರ್ಕಾರಿ ನೌಕರರ ಭವನದಲ್ಲಿ ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಆಯ್ಕೆಗೆ ವಿಶ್ವೇಶ್ವರಯ್ಯ ನಗರದ ಬಿಇಒ ಕಚೇರಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮತದಾನ ನಡೆಯಿತು. ನಿವೃತ್ತ ಅಧಿಕಾರಿ ಸಾವಂತ ಚೌಗುಲಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ರಾತ್ರಿವರೆಗೂ ಮತ ಎಣಿಕೆ ಪ್ರಕ್ರಿಯೆ ನಡೆಯಿತು. ವಿಜೇತರು ಹಾಗೂ ಬೆಂಲಿಗರು ಪರಸ್ಪರ ಗುಲಾಲು ಹಚ್ಚಿಕೊಂಡು, ಎರಚಿ ಸಂಭ್ರಮಿಸಿದರು.

ಚುನಾಯಿತರಾದ ನಿರ್ದೇಶಕರು: ಪ್ರಸಾದ ಕುಲಕರ್ಣಿ (ಸಾಂಖ್ಯಿಕ ಇಲಾಖೆ), ಪಿ.ಬಿ. ಶೇಡಬಾಳ (ಭೂ ಮತ್ತು ಗಣಿ ವಿಜ್ಞಾನ), ಮಹಾಂತೇಶ ಪುಡಕಲಕಟ್ಟಿ (ಎನ್‌ಸಿಸಿ), ನಾಗಪ್ಪ ನಾಗಲೋಟಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ), ಕಿರಣ ಸಾವಂತನವರ, ರಾಜಕುಮಾರ ಕಾಂಬಳೆ, ಮಂಜುನಾಥ ಬೀಸನ್ನಳ್ಳಿ (ಆರೋಗ್ಯ ಇಲಾಖೆ), ಮನೋಜಗೌಡ ಎಸ್., ರಾಜು ಮಹೇಂದ್ರಕರ (ಕೃಷಿ), ಮಹಾಂತೇಶ ಸಜ್ಜನ (ಸಹಕಾರ), ಶಿವರಾಜ್ ಮಾವಿನಕಟ್ಟಿ (ಅಬಕಾರಿ), ವಿಶ್ವನಾಥ ಹುಣಶಿಕಟ್ಟಿ (ಅರಣ್ಯ), ನಾರಾಯಣ ಪುರ (ಶಿಕ್ಷಣ), ಮಹಾಂತೇಶ ಎಂ. (ಪೊಲೀಸ್) ಹಾಗೂ ಗುರು ಹಿರೇಮಠ (ಕೆಜಿಇಡಿ).

ಜೂನ್ 27ರಂದು ತಾಲ್ಲೂಕು ಘಟಕದ ಅಧ್ಯಕ್ಷರ ಚುನಾವಣೆ ನಡೆಯಲಿದೆ. ನಂತರ, ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಗೆ ಜುಲೈ 11ಕ್ಕೆ ಚುನಾವಣೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT