ರಾಯಬಾಗ: ಮನೆಗೊಬ್ಬರು ಸ್ವಾಮಿಗಳು, ಮನೆಗೊಂದು ದೇವರು ಇರುವಂತೆ ಮನೆತನಕ್ಕೊಬ್ಬ ಹೆಳವ ಇರುವುದು ಈ ನೆಲದ ಸಂಸ್ಕೃತಿ. ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಅಲೆಮಾರಿ ಜೀವನ ನಡೆಸುತ್ತಿರುವ ಹೆಳವ ಸಮುದಾಯವು ತನ್ನ ವಿಶಿಷ್ಟ ಪರಂಪರೆಯನ್ನು ಇಂದಿಗೂ ಜೀವಂತವಾಗಿಟ್ಟುಕೊಂಡಿದೆ. ಹೊತ್ತಿಗೆಗಳನ್ನು ಹೊತ್ತುಕೊಂಡು ಮನೆಮನೆಗೆ ತೆರಳಿ ಕುಟುಂಬಗಳ ಪೂರ್ವಜರ, ಪೀಳಿಗೆಯ ವಿವರಗಳನ್ನು ಹೇಳುವ ಕಾಯಕ ಇವರದು. ಆದರೆ, ಇವರ ಬದುಕಿಗೇ ಒಂದು ನೆಲೆ ಇಲ್ಲದಾಗಿದೆ.

ಹೆಳವರ ಮೂಲ ಹೆಸರು ‘ಹೇಳುವವರು’ ಆಗಿರಬಹುದು ಎಂಬ ಬಗ್ಗೆಯೂ ಇತಿಹಾಸಕಾರರು ದಾಖಲೆ ನೀಡಿದ್ದಾರೆ. ಊರ ಜನರೆಲ್ಲ ಇತಿಹಾಸವನ್ನು ತಮ್ಮ ಹೊತ್ತಿಗೆಗಳಲ್ಲಿ ದಾಖಲಿಸಿಕೊಳ್ಳುವ ಇವರು, ತಮ್ಮದೇ ಇತಿಹಾಸದ ಅರಿವಿಲ್ಲದೆ ಬದುಕುತ್ತಿದ್ದಾರೆ. ನೂರಾರು ಜಾತಿಗಳು ಇರುವ ಈ ದೇಶದಲ್ಲಿ ಹೆಳವರಿಗೆ ಅವರದೇ ಆದ ಆದ್ಯತೆ, ಸ್ಥಾನವಿದೆ. ಹೆಳವರನ್ನು ಮನೆಯ ಹೆಣ್ಣುಮಕ್ಕಳು ಎಂದೇ ಪರಿಗಣಿಸುವಷ್ಟು ಆಪ್ತರು ಅವರು.

ಆದರೆ, ಆಧುನಿಕ ಸಂಸ್ಕೃತಿ ಬೆಳೆದಂತೆ ಇವರ ಬದುಕೂ ಕಮರುತ್ತ ಸಾಗಿದೆ. ಉದ್ಯೋಗವೂ ಇಲ್ಲ, ಕುಲದ ಕಾಯಕವನ್ನೂ ಮುಂದುವರಿಸಲಾಗಿದೇ, ಸರ್ಕಾರದ ಸೌಕರ್ಯಗಳೂ ಇಲ್ಲದೆ ಪರದಾಡುವಂತಾಗಿದೆ.

ಬೆಳೆದು ಬಂದಿದ್ದು ಹೇಗೆ: ಶತಮಾನಗಳ ಸಂಸ್ಕೃತಿ ಇವರದು. ತಾಳೆ ಎಲೆ, ಹಳೆಯ ಬಟ್ಟೆ ಅಥವಾ ಕೈಬರಹದ ನೋಟ್ಗಳಲ್ಲಿ ಸಂಗ್ರಹಿಸಿದ ವಂಶವೃಕ್ಷದ ಮಾಹಿತಿಯನ್ನು ತೆರೆದು ವಿವರಿಸುವ ಇವರ ಮಾತಿಗೆ ಗ್ರಾಮೀಣ ಜನರಲ್ಲಿ ಇನ್ನೂ ಅಪಾರ ನಂಬಿಕೆ ಇದೆ.

ಒಂದು ಕುಟುಂಬದಲ್ಲಿ ಮಗು ಜನಿಸಿದ ಸುದ್ದಿ ಕೇಳಿದಾಗ ಹೆಳವರು ಆ ಮನೆಗೆ ತೆರಳಿ ಪಿತೃ ಪರಂಪರೆ ವಿವರಿಸಿ ಆಶೀರ್ವಚನ ನೀಡುತ್ತಾರೆ. ಈ ಸಂದರ್ಭ ಕುಟುಂಬಸ್ಥರು ಸಂಪ್ರದಾಯದಂತೆ ಚಿನ್ನ, ಬೆಳ್ಳಿ, ಹಣ, ಮೇಕೆ, ಕರು ಮುಂತಾದ ಕಾಣಿಕೆಗಳನ್ನು ನೀಡಿ ಅವರನ್ನು ಗೌರವಿಸುತ್ತಾರೆ. ಇವರಿಗೆ ಸಿಗುವ ಕಾಣಿಕೆ ಕೇವಲ ಆದಾಯವಲ್ಲ, ಪಿತೃಗಳ ನೆನಪು ಹಾಗೂ ಪರಂಪರೆಯ ಮಾನ್ಯತೆಯ ಸೂಚಕ.

ಹೆಳವ ಸಮಾಜಕ್ಕೆ ಎಷ್ಟು ವರ್ಷಗಳ ಇತಿಹಾಸ ಇದೆ ಎಂಬ ಬಗ್ಗೆ ಸಂಶೋಧನೆಗಳು ನಡೆದಿವೆ. ಆದರೆ, ಜನಸಾಮಾನ್ಯರ ಬಳಿ ಇದರ ಯಾವುದೇ ಮಾಹಿತಿ ಇಲ್ಲ. ಹೀಗಾಗಿ, ಅವರು ಭವಿಷ್ಯ ನಿರ್ಮಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ.

ರಾಯಬಾಗ ತಾಲ್ಲೂಕಿನ ಮಂಟೂರ ಗ್ರಾಮವೊಂದರಲ್ಲಿಯೇ ಸುಮಾರು 160ಕ್ಕಿಂತ ಹೆಚ್ಚಿನ ಹೆಳವ ಸಮಾಜದ ಕುಟುಂಬಗಳು ವಾಸ ಇವೆ. ಅಲೆಮಾರಿ ಹೆಳವ ಸಮಾಜದ ದೈನಂದಿನ ಬದುಕು ಇನ್ನೂ ಮೂಲಭೂತ ಸೌಕರ್ಯಗಳ ಕೊರತೆಯಲ್ಲಿ ತತ್ತರಿಸಿವೆ. ಜಿಲ್ಲೆಯಲ್ಲೇ ಹೆಚ್ಚು ಹೆಳವ ಸಮುದಾಯವಿರುವ ಮಂಟೂರ ಗ್ರಾಮದಲ್ಲಿಯೇ.

12 ಕುಟುಂಬಗಳು ಸುಮಾರು 12 ವರ್ಷಗಳಿಂದ ಅನ್ನಭಾಗ್ಯ ಹಾಗೂ ಉಳಿದೆಲ್ಲ ಕುಟುಂಬಗಳು ಶುದ್ಧ ಕುಡಿಯುವ ನೀರು, ಶೌಚಾಲಯ, ವಸತಿ ಯೋಜನೆಗಳಂತಹ ಮೂಲಭೂತ ಅವಶ್ಯಕತೆಗಳಿಂದ ವಂಚಿತರಾಗಿದ್ದಾರೆ. ಅನೇಕ ಸಲ ಅರ್ಜಿ ಸಲ್ಲಿಸಿದರೂ ಇಲಾಖೆ ಗಮನಹರಿಸದಿರುವುದು ಕುಟುಂಬಗಳ ಮನದಲ್ಲಿ ಬೇಸರ ಮೂಡಿಸಿದೆ.

ಹೆಳವ ಸಮುದಾಯದ ಕುಟುಂಬಗಳು ಇನ್ನೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿವೆ. ವಸತಿ, ಶುದ್ಧ ಕುಡಿಯುವ ನೀರು, ಸಮರ್ಪಕ ರಸ್ತೆ, ವಿದ್ಯುತ್, ಪಡಿತರ ಹಾಗೂ ಆರೋಗ್ಯ ಸೇವೆಗಳು ತಲುಪದೇ ಸಮಾಜದ ದುರ್ಬಲ ವರ್ಗ ಇನ್ನೂ ಹಿಂದುಳಿದಂತೆ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ಯಾರಂಟಿಗಳ ಬಗ್ಗೆ ದೊಡ್ಡ ದೊಡ್ಡ ಚರ್ಚೆಗೆಳು ನಡೆದಿವೆ. ಆದರೂ ಹೆಳವ ಸಮುದಾಯದ ಹಲವು ಕುಟುಂಬಗಳು ಇನ್ನೂ ಮೂಲಸೌಕರ್ಯಗಳಿಗೆ ವಂಚಿತರಾಗಿರುವುದು ವ್ಯಂಗ್ಯ. ರಸ್ತೆ, ಕುಡಿಯುವ ನೀರು, ವಿದ್ಯುತ್, ಆರೋಗ್ಯ ಕೇಂದ್ರ, ಶಾಲೆ... ಇವೆಲ್ಲವೂ ಮರೀಚಿಕೆ ಆಗಿವೆ.

ಒಂದೂರಿನಿಂದ ಮತ್ತೊಂದೂರಿಗೆ ಸಾಗಿ ನೆಲೆಸುವ ಈ ಸಮಾಜಕ್ಕೆ ಸರಿಯಾದ ವಿಳಾಸ ದಾಖಲೆಗಳಿಲ್ಲದೆ ಯೋಜನೆಗಳ ಲಾಭ ತಲುಪುತ್ತಿಲ್ಲ. ಕೆಲ ಕುಟುಂಬಗಳು ಬಡತನದಿಂದ ಕೆಲದಿನ ಊಟವಿಲ್ಲದೆ ಉಪವಾಸವಿರುವಂತ ಸ್ಥಿತಿ ಎದುರಿಸುತ್ತಿವೆ. ಆಧುನಿಕ ಯುಗಕ್ಕೆ ಕಾಲಿಟ್ಟಿರುವ ರಾಜ್ಯದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾರದಿರುವುದು ದುರಂತ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಸಂಚಾರಿ ಹೆಳವರಿಗಾಗಿ ವಿಶೇಷ ಮಾನದಂಡ ಸಿದ್ಧಪಡಿಸಬೇಕು. ಮಂಟೂರಿನಲ್ಲಿ ಸುಮಾರು 12 ಕುಟುಂಬಗಳು ಪಡಿತರ ಚೀಟಿಯನ್ನು ಹೊಂದಿಲ್ಲ. ಇದರ ಬಗ್ಗೆ ಇಲಾಖೆಯ ಗಮನಕ್ಕೆ ತರಲಾಗಿದೆ
ಶೋಭಾ ರಾವಸಾಬ ಮೇಘಾಡೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಟೂರ

ಮಂಟೂರಿನ ಯುವಕರು ಕೆಲಸಕ್ಕೆ ಹೊರಗಡೆ ಹೋಗಲು ಇಷ್ಟಪಡುತ್ತಾರೆ. ಮನೆಯಲ್ಲಿರುವ ತಂದೆ ತಾಯಿ ಮಕ್ಕಳು ಇನ್ನೂ ಮೂಲಭೂತ ಸೌಲಭ್ಯಗಳಿಗಾಗಿ ಪರದಾಡುತ್ತಿದ್ದಾರೆ. ಪಡಿತರ ಧಾನ್ಯವಂತೂ ಇಲ್ಲವೇ ಇಲ್ಲ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳುವ ಕೇಂದ್ರ ಸರ್ಕಾರದ ಯಾವೊಂದು ಯೋಜನೆಯ ಲಾಭವೂ ಇವರಿಗೆ ಸಿಕ್ಕಿಲ್ಲ. ನಮ್ಮ ಸಮುದಾಯದ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸೋದಿಲ್ಲ.

-ಶೋಭಾ ಭೀಮಪ್ಪ ಹೆಳವರ ಗ್ರಾಮ ಪಂಚಾಯಿತಿ ಸದಸ್ಯೆ

ಸಂಚಾರಿ ಹೆಳವ ಸಮಾಜಕ್ಕೆ ಸರ್ಕಾರದ ಸೌಕರ್ಯ ಒದಗಿಸುವ ಸವಶ್ಯಕತೆ ಇದೆ. ಸರ್ಕಾರದ ಮಾನದಂಡಗಳನ್ನು ನಾವು ಅನುಸರಿಸಬೇಕಾಗುತ್ತದೆ. ಅವರ ಸಮಸ್ಯೆಗಳನ್ನು ಪರಿಶೀಲಿಸಿ ಕೂಡಲೇ ಗ್ರಾಮ ಲೆಕ್ಕಾಧಿಕಾರಿಗೆ ಚೆಕ್ಲಿಸ್ಟ್ ಕೊಟ್ಟು ವರದಿ ನೀಡುವಂತೆ ಸೂಚಿಸುತ್ತೇನೆ. ವರದಿ ಬಂದ ನಂತರ ತಂತ್ರಾಂಶದಲ್ಲಿ ಹಾಕಿ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಮಾಡುತ್ತೇವೆ.

-ಶರಣಪ್ಪ ಬಾಗೇವಾಡಿ ಆಹಾರ ನಿರೀಕ್ಷಕ ರಾಯಬಾಗ

ಹೆಳವ ಸಮುದಾಯದ ಕುಟುಂಬಗಳು ಪೀಳಿಗೆಗಳಿಂದ ಸಂರಕ್ಷಿಸಿಕೊಂಡು ಬಂದಿರುವ ಕೈಬರಹದಲ್ಲಿ ಬರೆದ ವಂಶಾವಳಿ ಹೊತ್ತಿಗೆಗಳನ್ನು ಸರ್ಕಾರ ಅಧಿಕೃತ ದಾಖಲೆಗಳೆಂದು ಪರಿಗಣಿಸಬೇಕು. ಈ ದಾಖಲೆಗಳೇ ನಮ್ಮ ಇತಿಹಾಸ ಗುರುತು ಮತ್ತು ಸಾಮಾಜಿಕ ಅಸ್ತಿತ್ವಕ್ಕೆ ಸಾಕ್ಷಿ.ಅಜೀತ ಮಾರುತಿ ಹೆಳವಿ ಗ್ರಾಮಸ್ಥ ಗ್ರಾಮದಲ್ಲಿರುವ ಹೆಳವ ಸಮುದಾಯದ ಕುಟುಂಬಗಳು ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೇ ಸಂಕಷ್ಟದಲ್ಲಿವೆ. ಶುದ್ಧ ಕುಡಿಯುವ ನೀರು ರಸ್ತೆ ಪಡಿತರ ಆರೋಗ್ಯ ಹಾಗೂ ಶಿಕ್ಷಣ ಸೌಲಭ್ಯಗಳು ತಕ್ಷಣ ಒದಗಿಸಬೇಕು. ಸರ್ಕಾರ ಕೂಡಲೇ ಸ್ಪಂದಿಸಿ ಅಗತ್ಯ ಸೌಲಭ್ಯಗಳನ್ನು ನೀಡಬೇಕು.

-ಸಕ್ರೆವ್ವ ಹೆಳವಿ ಸಮುದಾಯದ ಮಹಿಳೆ

ನಿಜವಾದ ಇತಿಹಾಸಕಾರರು ಹೆಳವರನ್ನು ನಿಜವಾದ ಮತ್ತು ಸ್ಪಷ್ಟ ಇತಿಹಾಸ ನೀಡುವ ಇತಿಹಾಸಕಾರರು ಎಂದು ಕೇಂದ್ರ ಸರ್ಕಾರವೇ ಪರಿಗಣಿಸಿದೆ. ರಾಜ್ಯ ಸರ್ಕಾರ ಕೂಡ ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸುವಲ್ಲಿ ವಂಶಾವಳಿಗಳ ನಿರ್ಮಾನದಲ್ಲಿ ಆಸ್ತಿ ಕಲಹಗಳಲ್ಲಿ ಹೆಳವರ ದಾಖಲೆಗಳೇ ಪರಿಗಣಿತವಾಗಿವೆ. ನ್ಯಾಯಾಲಯಗಳಲ್ಲಿ ಹೂಡಿದ ಆಸ್ತಿ ದಾವೆಗಳಿಗೂ ಹೆಳವರು ದಾಖಲೆ ನೀಡಿದ ಉದಾಹರಣೆಗಳಿವೆ. ರಾಜ್ಯದ ಬಹುಪಾಲು ರಾಜ ಪರಂಪರೆ ಅರಸೊತ್ತಿಗೆ ದೇಸಗತಿ ಗೌಡಕಿ ಜಮೀನ್ದಾರಿ ಮನೆತನಗಳ ದಾಖಲೆಗಳನ್ನು ಸಂಗ್ರಹಿಸಿ ಒದಗಿಸಿದ್ದು ಇದೇ ಹೆಳವರು. ದೊರೆಗಳಿಂದ ಹಿಡಿದು ಸಾಮಾನ್ಯ ಬಡವರವರೆಗೂ ಅವರು ದಾಖಲೆಗಳನ್ನು ಹಾಡಿ ಹೊಗಳುತ್ತಾರೆ. ಅವರನ್ನು ಆಧರಿಸಿಯೇ ಇತಿಹಾಸಕಾರರು ಸ್ಪಷ್ಟವಾದ ಚರಿತ್ರೆ ರಚನೆ ಮಾಡಿದ ಉದಾಹರಣೆಗಳೂ ಸಾಕಷ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.