ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರು ಮಹಿಳೆಯರಿಗೆ ತಯಾರಿಸಿದ ಹೆಲ್ಮೆಟ್ ಬಿಡುಗಡೆ

Last Updated 10 ಮಾರ್ಚ್ 2021, 12:25 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಉದ್ಯಮಬಾಗ್‌ನಲ್ಲಿರುವ ವೇಗಾ ಹೆಲ್ಮೆಟ್ಸ್‌ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಯು ಮಹಿಳೆಯರಿಗೆ ತಯಾರಿಸಿದ ‘ದೇವಿ’ ಹೆಸರಿನ ಹೆಲ್ಮೆಟ್ ಬಿಡುಗಡೆ ಮಾಡುವ ಮೂಲಕ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಂಪನಿಯಲ್ಲಿ 2ಸಾವಿರ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹಿರಿಯ ಸಿಬ್ಬಂದಿಯನ್ನು ಸತ್ಕರಿಸಲಾಯಿತು.

ಎಲ್‌ಐಸಿ ಏಜೆಂಟ್ ಸ್ಮಿತಾ ಕುಲಕರ್ಣಿ, ಎಚ್ಐವಿ ಸೋಂಕಿತರಿಗೆ ನೆರವಾಗುವ ಎನ್‌ಜಿಒ ನಡೆಸುತ್ತಿರುವ ಕಸ್ತೂರಿ ಮಾಳಿ ಅವರನ್ನು ಸಂಗೀತಾ ದಿಲೀಪ್ ಚಿಂಡಕ್, ಶಾಲಿನಿ ಚಿಂಡಕ್‌, ಅಲ್ಕಾ ಚಿಂಡಕ್‌ ಹಾಗೂ ಸಂಜನಾ ಚಿಂಡಕ್ ಸತ್ಕರಿಸಿದರು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಚಿಂಡಕ್, ನಿರ್ದೇಕರಾದ ಗಿರಿಧರ್ ಚಿಂಡಕ್, ಸುಹಾಸ್ ಚಿಂಡಕ್, ಉತ್ತಮ್ ಚಿಂಡಕ್, ಕುನಾಲ್ ಚಿಂಡಕ್, ಪಾರ್ಥಾ ಚಿಂಡಕ್‌ ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪರಿಸರ ಸ್ನೇಹಿ ಉಪಕ್ರಮದ ಭಾಗವಾಗಿ 2ಸಾವಿರ ಸಸಿಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT