ಕಾಗವಾಡ: ತಾಲ್ಲೂಕಿನ ಐನಾಪುರ ಪಟ್ಟಣದ 56ನೇ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಜೋಡು ಕುದುರೆ ಗಾಡಿ ಶರ್ಯತ್ತು ಮತ್ತು ವಿವಿಧ ಬಗೆಯ ಶ್ವಾನಗಳ ಪ್ರದರ್ಶನ ನೋಡುಗರ ಗಮನ ಸೆಳೆದವು.

ಜಾತ್ರೆಯ ಎರಡನೆಯ ದಿನವಾದ ಗುರುವಾರ ಜೋಡು ಕುದುರೆ ಗಾಡಿ ಶರ್ಯತ್ತಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ವಿವಿಧ ಗ್ರಾಮಗಳ ಹತ್ತು ಗಾಡಿಗಳು ಭಾಗವಹಿಸಿದ್ದವು. ಅವುಗಳಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಚಂದೂರ ಗ್ರಾಮದ ಸಚಿನ ಪಾಟ ಅವರ ಜೋಡು ಕುದುರೆಗಳು ಪ್ರಥಮ, ಜಮಖಂಡಿ ಪಟ್ಟಣದ ಅನಿರುದ್ಧ ಜಮಖಂಡಿ ಅವರ ಕುದುರೆಗಳು ದ್ವೀತಿಯ, ಐನಾಪುರ ಪಟ್ಟಣದ ಭೂಷಣ ಪಾಟೀಲ ಅವರ ಕುದುರೆಗಳು ತೃತೀಯ ಸ್ಥಾನ ಪಡೆದವು. ಕೊಲ್ಹಾಪುರ ಜಿಲ್ಲೆಯ ಮುರಗೊಡ ಗ್ರಾಮದ ಅಕ್ಷಯ ಮಾಳಂಗೆ ಅವರ ಕುದುರೆಗಳು ಪ್ರೋತ್ಸಾಹಕ ಬಹುಮಾನ ಪಡೆದವು.

ಗಮನಸೆಳೆದ ಶ್ವಾನಗಳ ಪ್ರದರ್ಶನ: ಜಾತ್ರೆಯಲ್ಲಿ ಶ್ವಾನ ಪ್ರದರ್ಶನಕ್ಕೆ ಬಂದಿದ್ದ ರಾಟ್ ವೀಲರ್, ಲೆಬ್ರಡಾರ್, ಡಾಬರ್ಮನ್, ಪಿಟ್ಬುಲ್, ಡ್ಯಾಶ್ ಹೌಂಡ್, ಪೊಮೊರಿಯನ್, ಮುಧೋಳ... ಹೀಗೆ ವಿವಿಧ ತಳಿಗಳ 70ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸಿ ಗಮನ ಸೆಳೆದವು. ಅತ್ಯುತ್ತಮ ಶ್ವಾನಗಳಿಗೆ ಬಹುಮಾನ ನೀಡಲಾಯಿತು.

ವಿಜೇತರಾದ ಕುದುರೆ ಗಾಡಿ ಹಾಗೂ ಶ್ವಾನಗಳಿಗ ಮಾಲಿಕರಿಗೆ ಜಾತ್ರಾ ಕಮಿಟಿ ಅಧ್ಯಕ್ಷ ದಾದಾಸಾಹೇಬ ಜಂತೆನ್ನವರ, ಉಪಾಧ್ಯಕ್ಷ ಸಂತೋಷ ಪಾಟೀಲ, ಪಟ್ಟಣ ಪಂಚಾಯಿತಿ ಸದಸ್ಯ ಅರುಣ ಗಾಣಿಗೇರ, ಸಂಜಯ ಕೂಚನೂರೆ, ಪ್ರವೀಣ ಗಾಣಿಗೇರ, ರಾಜು ಪೋತದಾರ, ಸಂಜಯ ಬಿರಡಿ, ಸುರೇಶ ಅಡಿಶೇರಿ, ದಾದಾ ಪಾಟೀಲ, ಸುದರ್ಶನ ಜಂತೆನ್ನವರ, ಅಣ್ಣಾಸಾಹೇಬ ಡೂಗನವರ , ಕುಮಾರ ಅಪರಾಜ, ವಿಶ್ವನಾಥ ನಾಮದಾರ, ಬಹುಮಾನಗಳನ್ನು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.