ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿದರೆ ಎಲ್ಲವೂ ಮರೆತು ಹೋಗುತ್ತೆ!

Last Updated 25 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಕುಡಿತದ ದಾಸರಾದವರಿಗೆ ಒಂದಿಲ್ಲೊಂದು ಆರೋಗ್ಯದ ಸಮಸ್ಯೆ ಕಾಡುವುದು ಸಹಜ. ಈ ಪಟ್ಟಿಗೆ ಈಗ ಮರೆವಿನ ಕಾಯಿಲೆ ‘ಡಿಮೆನ್ಷಿಯಾ’ ಕೂಡಾ ಸೇರುವ ಆತಂಕ ಎದುರಾಗಿದೆ. ಆಗಾಗ್ಗೆ ಮಿತಿ ಮೀರಿ ಮದ್ಯಪಾನ ಸೇವಿಸಿ ಆರೋಗ್ಯದ ಸಮಸ್ಯೆ ಹೊತ್ತು ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಜೀವನಶೈಲಿಯ ಅಧ್ಯಯನವೊಂದು ಬ್ರಿಟನ್‌ನಲ್ಲಿ ನಡೆದಿದೆ. ಫ್ರೆಂಚ್‌ ನ್ಯಾಷನಲ್‌ ಹಾಸ್ಪಿಟಲ್‌ನಲ್ಲಿ ದಾಖಲಾಗಿದ್ದ ಡಿಮೆನ್ಷಿಯಾ ರೋಗಿಗಳ ಐದು ವರ್ಷಗಳ ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡು ಈ ಅಧ್ಯಯನ ನಡೆಸಲಾಗಿತ್ತು. ಅದರ ವರದಿ ಲಾನ್ಸೆಟ್‌ ಪಬ್ಲಿಕ್‌ ಹೆಲ್ತ್‌ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಈ ವರದಿ ಪ್ರಕಟವಾಗುತ್ತಿದ್ದಂತೆ ಮದ್ಯವ್ಯಸನಿಗಳಿಗಿಂತಲೂ ಹೆಚ್ಚಾಗಿ ಚಿಂತೆಗೀಡಾದವರು ಯಾರು ಗೊತ್ತೇ? ಆಗೊಮ್ಮೆ ಈಗೊಮ್ಮೆ ಮದ್ಯ ಸೇವನೆ ಮಾಡುವವರು, ಪ್ರತಿನಿತ್ಯ ಅಲ್ಪ ಪ್ರಮಾಣದಲ್ಲಿ ಕುಡಿಯುವವರು ಮತ್ತು ಪ್ರತಿನಿತ್ಯ ಮಿತಿಯಿಟ್ಟುಕೊಂಡು ಕುಡಿಯುವವರು.

ಒಟ್ಟಿನಲ್ಲಿ, ‘ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ’ ಎಂಬ ಶಾಸನ ವಿಧಿಸಿದ ಎಚ್ಚರಿಕೆ ಕುಡುಕರ ಬದುಕಿನಲ್ಲಿ ನಿಜವಾಗುತ್ತಿದೆ. ಹಾಗಿದ್ದರೆ, ‘ಕುಡಿದರೆ ಎಲ್ಲವೂ ಮರೆತು ಹೋಗುತ್ತದೆ’ ಎಂಬ ಮಾತು ಎಷ್ಟು ಸತ್ಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT