ಶನಿವಾರ, ಜೂನ್ 12, 2021
24 °C

ಪರಮಾನಂದವಾಡಿ: ವಿವಿಧೆಡೆ ಸ್ವಾತಂತ್ರ್ಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪರಮಾನಂದವಾಡಿ: ಗ್ರಾಮದ ವಿವಿಧ ಸಂಘ– ಸಂಸ್ಥೆ ಮತ್ತು ಶಾಲಾ– ಕಾಲೇಜುಗಳಲ್ಲಿ 74ನೇ ಸ್ವಾತಂತ್ರ್ಯೋತ್ಸವನ್ನು ಶನಿವಾರ ಆಚರಿಸಲಾಯಿತು.

ಗುರುದೇವ ಸಿದ್ದೇಶ್ವರ ದಿವ್ಯಜೀವನ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲೊ ಸಂಜೀವಕುಮಾರ ಭಾಂಡಿ ಪೂಜೆ, ಮಹಾಲಿಂಗಪ್ಪ ದುಪದಾಳ ಧ್ವಜಾರೋಹಣ ಮಾಡಿದರು. ಶಿವಬಸವ ಕೃಪಾ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘದಲ್ಲಿ ಸಿದ್ದಲಿಂಗ ಚೌಗಲಾ ಹಾಗೂ ಡಾ.ಪ್ರವೀಣ ಮುಂಡಗನೂರ ನೆರವೇರಿಸಿದರು.

ಗುರುದೇವ ಬ್ರಹ್ಮಾನಂದ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಡಶಾಲೆಯಲ್ಲಿ ಸೇವಂತಿ ಚೌಗಲಾ, ಜಿ.ಎಸ್ ನಾಯಿಕ, ಮಹಾಕಾಳಿ ಶಿಕ್ಷಣ ಸಂಸ್ಥೆಯ ಗುರುದೇವ ಬ್ರಹ್ಮಾನಂದ ಅನುದಾನಿತ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ರಮೇಶ ಒಳಕಲ್ಲೆ, ಬಂದೇನಾವಾಜ ಮುಲ್ಲಾ, ಕನಕದಾಸ ಕೋ-ಆಪ್  ಅರ್ಬನ್ ಸೊಸೈಟಿಯಲ್ಲಿ ಬಿಬನಸಾಬ ರಾಜಾಪೂರೆ, ರಾಜು ಪೋತದಾರ, ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಬಾಳಾಸಾಹೇಬ ಚೌಗಲಾ, ರಾಜು ಬೇವನೂರ, ಮಹಾಲಕ್ಷ್ಮಿ ಸಹಕಾರ ಕ್ರೆಡಿಟ್ ಸೊಸೈಟಿಯಲ್ಲಿ ಶರದ ಕೌಲಗುಡ, ಮಲ್ಲಿಕಾರ್ಜುನ ಪಾಲಭಾವಿ ನೆರವೇರಿಸಿದರು.

ಭುವನೇಶ್ವರಿ ವಿವಿಧೋದ್ದೇಶ ಸಹಕಾರಿ ಸೊಸೈಟಿಯಲ್ಲಿ ಮೌಲಾಲಿ ಮುಲ್ಲಾ, ನಾಬೀರ ಸಾಜನೆ, ಪಶು ಆಸ್ಪತ್ರೆಯಲ್ಲಿ ಬಾಳು ಸನದಿ, ಭೀಮರಾವ ಡವಳೆ, ಎಸ್.ಆರ್. ದಳವಾಯಿ ಸಂಯುಕ್ತ ಪ್ರೌಡಶಾಲೆ, ಪಿಯು ಹಾಗೂ ಪದವಿ ಕಾಲೇಜಿನಲ್ಲಿ ಎನ್.ಬಿ.  ಕುಸನಾಳೆ, ವಿಜಯ ದಳವಾಯಿ, ಮಹಾಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ಮೌಲಾಲಿ ಮುಲ್ಲಾ ಪೂಜೆ, ನಿಂಗಪ್ಪ ಮುರಗನ್ನವರ, ಮಹಾಲಕ್ಷ್ಮಿ ಪಿ.ಕೆ.ಪಿ.ಎಸ್.ನಲ್ಲಿ ವಿವೇಕಾನಂದ ಪಾಲಭಾವಿ, ಕುಮಾರ ಗುಡೋಡಗಿ ಪೂಜೆ ಹಾಗೂ ಧ್ವಜಾರೋಹಣ ಮಾಡಿದರು.

ಎಸ್.ವಿ. ಕ್ಷೀರಸಾಗರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶಿದ್ರಾಮ ಹಟ್ಟಿಮನಿ, ಸಂತೋಷ ಸನದಿ, ನವೋದಯ ವಿವಿಧ ಉದ್ದೇಶಗಳ ಸಹಕಾರಿ ಸಂಘದಲ್ಲಿ ವಿವೇಕಾನಂದ ಬಸ್ತವಾಡೆ, ಬಸವರಾಜ ಕೋರೆ, ಬೀರೇಶ್ವರ ಸಹಕಾರಿ ಕ್ರೆಡಿಟ್‌ ಸೊಸೈಟಿಯಲ್ಲಿ ಸವರಾಜ ನವಲ್ಯಾಳ, ರಾವಸಾಬ ನಾಂದ್ರೆ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ವಿಶ್ವನಾಥ ದಳವಾಯಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಭೀಮರಾವ ಡವಳೆ, ಬಸವರಾಜ ಕೋರೆ ಕ್ರಮವಾಗಿ ಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.