ಯರಗಟ್ಟಿ: ಪಟ್ಟಣದ ಬಸ್ ನಿಲ್ದಾಣ ಬಳಿ ಇಂದಿರಾ ಕ್ಯಾಂಟೀನ್ ನಿರ್ಮಿಸಿ ಐದು ತಿಂಗಳಾದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಲಕ್ಷಾಂತರ ಹಣ ಸುರಿದು ನಿರ್ಮಿಸಿದ ಈ ಕಟ್ಟಡ ಈ ಹಾಳುಕೊಂಪೆಯಾಗಿ ನಿಂತಿದೆ. ಉದ್ದೇಶಿತ ಯೋಜನೆಯಿಂದ ಬಡವರು, ಕಾರ್ಮಿಕರು ವಂಚಿತರಾಗಿದ್ದಾರೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಕೂಡ ಒಂದು. ಬಡವರು, ಕೂಲಿ ಕಾರ್ಮಿಕರು, ಡಿ ದರ್ಜೆ ನೌಕರರು, ಉದ್ಯೋಗಕ್ಕೆ, ಶಿಕ್ಷಣಕ್ಕೆ ಹಾಗೂ ವೈಯಕ್ತಿಕ ಕೆಲಸಗಳಿಗೆ ಪಟ್ಟಣಗಳಿಗೆ ದಿನವೂ ವಲಸೆ ಬರುವ ಜನರು, ಬೀದಿ ಬದಿ ವ್ಯಾಪಾರಿಗಳು ಉಪವಾಸ ಇರಬಾರದು ಎಂಬುದು ಇಂದಿರಾ ಕ್ಯಾಂಟೀನ್ ಆರಂಭಿಸಿದ ಉದ್ದೇಶ. ಪ್ರತಿ ನಗರ, ಪಟ್ಟಣ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಇಂಥ ಕೆಲಸಕ್ಕೆ ಬರುವವರಿಗಾಗಿ ಸರ್ಕಾರ ಇಂದಿರಾ ಕ್ಯಾಂಟೀನ್ ತೆರೆದಿದೆ.

ಆದರೆ, ಯರಗಟ್ಟಿ ತಾಲ್ಲೂಕು ರಚನೆಯಾಗಿ ಆರು ವರ್ಷಗಳು ಕಳೆದರೂ ಇದರಿಂದ ವಂಚಿತವಾಗಿತ್ತು. ಜನರು ಸಾಕಷ್ಟು ಹೋರಾಟ ಮಾಡಿದ ಮೇಲೆ, ಶಾಸಕರಿಗೆ ಮನವಿ ನೀಡಿದ ಮೇಲೆ ಒಂದೇ ಒಂದು ಇಂದಿರಾ ಕ್ಯಾಂಟೀನ್ ಮಂಜೂರು ಮಾಡಲಾಗಿದೆ.

ಬಸ್ ನಿಲ್ದಾಣ ಬಳಿ ಸುಸಜ್ಜಿತ ಕಟ್ಟಡ ಕಟ್ಟಲಾಗಿದೆ. ಇಂದಿರಾ ಗಾಂಧಿ ಆವರ ದೊಡ್ಡ ಕಟೌಟು ಕೂಡ ನಿಲ್ಲಿಸಲಾಗಿದೆ. ಅಡುಗೆ ತಯಾರಿಗೆ ಬೇಕಾದ ಸಲಕರಣೆಗಳು, ಕೊಠಡಿ, ತರಕಾರಿ ಸಂಗ್ರಹ ಸ್ಥಳ, ಜನರು ಬಂದು ಊಟ ಮಾಡಲು ಬೇಕಾದ ಸ್ಥಳ ಸೇರಿ ಎಲ್ಲವನ್ನೂ ನಿರ್ಮಿಸಲಾಗಿದೆ. ಆದರೆ, ಇದೂವರೆಗೆ ಉದ್ಘಾಟನೆ ಮಾತ್ರ ಮಾಡಿಲ್ಲ.

ರೈತ ಮುಖಂಡರು, ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಮಿಕರು ಈಗಾಗಲೇ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ ಯಾರೂ ಬೆಲೆ ಕೊಟ್ಟಿಲ್ಲ ಎಂಬುದು ಅವರ ಗೋಳು.

ಯರಗಟ್ಟಿ ಪಟ್ಟಣವು ತಾಲ್ಲೂಕು ಕೇಂದ್ರ ಆಗುವ ಮುನ್ನವೇ ವ್ಯಾವಹಾರಿಕವಾಗಿ, ಉದ್ಯೋಗ, ಶಿಕ್ಷಣದ ದೃಷ್ಟಿಯಿಂದ ಸಾಕಷ್ಟು ಬೆಳೆದಿದೆ. ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ, ಗೋಕಾಕ, ರಾಮದುರ್ಗ, ಸವದತ್ತಿ ಸೇರಿದಂತೆ ಮುಖ್ಯ ನಗರಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸ್ಥಾನ ಇದಾಗಿದೆ. ಜಿಲ್ಲೆಯನ್ನು ಪೂರ್ವ– ಪಶ್ಚಿಮ ಹಾಗೂ ಉತ್ತರ– ದಕ್ಷಿಣವಾಗಿ ವಿಭಾಗಿಸಿದರೆ ಯರಗಟ್ಟಿ ಕೇಂದ್ರ ಸ್ಥಾನದಲ್ಲಿ ಬರುತ್ತದೆ. ಒಂದಲ್ಲ ಒಂದು ರೀತಿ 10 ತಾಲ್ಲೂಕುಗಳಿಗೆ ಇದು ಸಂಪರ್ಕ ಕೇಂದ್ರ.

ಹೀಗಾಗಿ, ಇಲ್ಲಿ ಎಪಿಎಂಸಿ ಕಾರ್ಮಿಕರು, ಹಮಾಲಿಗಳು, ವರ್ತಕರು, ವಾಹನಗಳ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ಅವರ ಅನುಕೂಲಕ್ಕೆ ಇಂದಿರಾ ಕ್ಯಾಂಟೀನ್ ಬೇಗ ಆರಂಭಿಸಬೇಕು ಎಂದು ಮುಖಂಡರಾದ ಸಂತೋಷ ಚನ್ನಮೇತ್ರಿ, ಮಂಜು ನಿಲಪ್ಪನವರ, ರಂಗಪ್ಪ ಗಂಗರಡ್ಡಿ ಆಗ್ರಹಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಆರಂಭಿಸಲು ಕಾಲಹರಣ ಮಾಡುತ್ತಿರುವುದು ಸರಿಯಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು ಇತ್ತ ಗಮನ ಹರಿಸಬೇಕು
–ರಂಗಪ್ಪ ಗಂಗರಡ್ಡಿ, ಅಧ್ಯಕ್ಷ ರೈತ ಸಂಘದ ತಾಲ್ಲೂಕು ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.