ಬೆಳಗಾವಿ: ಇಲ್ಲಿನ ದಂಡು ಮಂಡಳಿ, ಭರತೇಶ ಶಿಕ್ಷಣ ಸಂಸ್ಥೆಯ ಹತ್ತಿರದ ಹೊಂದಿದ ಪ್ರದೇಶದಲ್ಲಿ ಯಾವುದೇ ಕಾನೂನು ಬದ್ಧ ಅನುಮತಿ ಇಲ್ಲದೇ, ಖಾಸಗಿ ಸಗಟು ಹೂವಿನ ಮಾರುಕಟ್ಟೆಯ ಪ್ರಾರಂಭಕ್ಕೆ ಹಂಚಿಕೆ ಮಾಡಿರುವ ವಿಚಾರವಾಗಿ ಸಂಸದ ಜಗದೀಶ ಶೆಟ್ಟರ್ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರದ ಮುಖೇನ ಗಮನ ಸೆಳೆದಿದ್ದಾರೆ.

ಹೂವಿನ ಸಗಟು ಮರುಕಟ್ಟೆ ಪ್ರಾರಂಭಕ್ಕೆ ದಂಡು ಮಂಡಳಿ ಈ ಪೂರ್ವದಲ್ಲಿ ಬೆಳಗಾವಿ ಕೃಷಿ ಉತ್ಪನ್ನ ಮರುಕಟ್ಟೆಯಿಂದ ಮತ್ತು ತೋಟಗಾರಿಕೆ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಅದರಂತೆ ಈಗಾಗಲೆ ಬೆಳಗಾವಿ ಅಶೋಕನಗರದಲ್ಲಿ ಹೂವಿನ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿರುವಾಗ ಎರಡನೇ ಸಗಟು ಹೂವಿನ ಮಾರುಕಟ್ಟೆ ಪ್ರಾರಂಭಕ್ಕೆ ದಂಡು ಮಂಡಳಿ ಒಪ್ಪಿಗೆ ನೀಡಿರುವುದು ಕಾನುನುಬದ್ಧವಲ್ಲದ ನಿರ್ಧಾರ.

ಈ ಕುರಿತು ಕೃಷಿ ಉತ್ಪನ್ನ ಮರುಕಟ್ಟೆ ಕಾರ್ಯದರ್ಶಿ ಸಹ ದಂಡು ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರದ ಮುಖೇನ ತಿಳಿಸಿ, ಹೂವಿನ ವ್ಯಾಪಾರ ಸ್ಥಗಿತಗೊಳಿಸುವಂತೆ ತಿಳಿಸಿದ್ದಾರೆ. ಆದರೆ, ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಇದಿ ದುಖಃದ ಸಂಗತಿ. ದಂಡು ಮಂಡಳಿ ನಡೆಸುವ ಮಾಸಿಕ ಸಭೆಗೆ ಬೆಳಗಾವಿ ಲೋಕಸಭಾ ಸದಸ್ಯರು ವಿಶೇಷ ಅಹ್ವಾನಿತರು ಆದರೆ ಇಂತಹ ಮಹತ್ವದ ನಿರ್ಧಾರ ಕೈಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಸಭೆಗೆ ಅಹ್ವಾನಿಸಲಾಗಿಲ್ಲ ಎಂದೂ ಸಂಸದ ತಿಳಿಸಿದ್ದಾರೆ.

ಮೇಲಾಗಿ, ದಂಡು ಮಂಡಳಿ ಪ್ರದೇಶ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಇದಾಗ್ಯೂ ಇಂತಹ ಮಹತ್ವವಾದ ವಿಷಯವನ್ನು ಗಮನಕ್ಕೆ ತರದೆ ನಿರ್ಧಾರ ತೆಗೆದುಕೊಂಡಿರುವುದು ಅಥವಾ ಸಭೆಯಲ್ಲಿ ಠರಾವು ಪಾಸ್ ಮಾಡಿರುವುದು ತುಂಬಾ ವಿಷಾದದ ಸಂಗತಿ. ಕೂಡಲೇ ಕಾನೂನು ಬದ್ಧವಲ್ಲದ ಸಗಟು ಹೂವಿನ ಮರುಕಟ್ಟೆಯಲ್ಲಿನ ವ್ಯಾಪಾರವನ್ನು ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಸಚಿವರಿಗೆ ಹಾಗೂ ಇದರೊಂದಿಗೆ ದಂಡು ಮಂಡಳಿ ರಕ್ಷಣಾ ಎಸ್ಟೇಟ್ ಅಧಿಕಾರಿಗೂ ಸಂಸದ ಒತ್ತಾಯಿಸಿದ್ದಾರೆ.

ಪ್ರಸ್ತಾಪಿತ ವಿಷಯವಾಗಿ ಸುದೀರ್ಘವಾಗಿ ಚರ್ಚಿಸಲು ಕೂಡಲೇ ಸಭೆಯೊಂದನ್ನು ಆಯೋಜಿಸುವಂತೆ ದಂಡು ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರದ ಮೂಲಕ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.