ರಾಯಬಾಗ: ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು 25 ವರ್ಷ ಪೂರೈಸಿರುವ ಏಕೈಕ ಪಕ್ಷವೇ ಜೆಡಿಎಸ್ ಪಕ್ಷ. ಈ ಪಕ್ಷ ಇಂದು ರಾಜ್ಯದ ರಾಜಕೀಯದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ ಹೇಳಿದರು.

ಪಟ್ಟಣದ ಪಿಎಲ್ ಡಿ ಬ್ಯಾಂಕ್ ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪಕ್ಷ ಸ್ಥಾಪನೆಯಾದ ದಿನದಿಂದಲೇ ರೈತರು, ಬಡವರು ಮತ್ತು ಸಾಮಾನ್ಯ ಜನರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷವಾಗಿ ಜೆಡಿಎಸ್ ಬೆಳೆದಿದೆ ಎಂದು ಹೇಳಿದರು.

ಪಕ್ಷದ 25ನೇ ವರ್ಷದ ಹಿನ್ನಲೆಯಲ್ಲಿ ವಿಜಯಪುರದಲ್ಲಿ ಆಯೋಜಿಸಿರುವ ಜನತಾ ಸಮಾವೇಶ ಕುರಿತು ಜೆಡಿಎಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಜಿಲ್ಲೆಯ ಎಲ್ಲಾ 18 ಮತಕ್ಷೇತ್ರಗಳಿಂದಲೂ ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಮಾಜಿ ಶಾಸಕ ಕಲ್ಲಪ್ಪ ಮಗೆಣ್ಣವರ, ಮುಖಂಡರಾದ ರಾಮು ರಜಪೂತ, ಜಿತೇಂದ್ರ ಯಮಕನಮರಡಿ, ರಶೀದ್ ತಾಂಬೋಳಿ, ಸದಾಶಿವ ಉಪ್ಪಾರ, ಹಾಲಪ್ಪ ವಂಟಮೂರೆ, ಇರ್ಫಾನ್ ತಾಂಬೋಳಿ, ಓಂಕಾರ ಶಾರಬಿದ್ರೆ, ಮಹೇಶ ವಂಟಮೂರೆ, ಸಂತೋಷ ಮಜ್ಜಗೆ, ಬೀರಪ್ಪ ಶಾಂಡಗೆ, ಮಲ್ಲಿಕಾರ್ಜುನ ಕೊಟ್ರೆ, ಸುನೀಲ ಕಾಂಬಳೆ, ಅಬ್ಬಾಸ ಲತೀಫನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.