ಬೆಳಗಾವಿ: ಸಾಹಿತಿ, ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಆಯ್ದ ಅನುಭವಗಳ ಕಥನ ‘ಕಾಗೆ ಕಾರುಣ್ಯದ ಕಣ್ಣು’ ಕೃತಿಯ ಎರಡನೇ ಆವೃತ್ತಿಯ ಜನಾರ್ಪಣೆ ಸಮಾರಂಭ ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ಮಾನವ ಬಂಧುತ್ವ ವೇದಿಕೆ–ಬೆಳಗಾವಿ ಆಶ್ರಯದಲ್ಲಿ ಅ.8ರ ಬೆಳಿಗ್ಗೆ 10.30ಕ್ಕೆ ನಗರದ ಕನ್ನಡ ಭವನ ರಂಗಮಂದಿರದಲ್ಲಿ ಜರುಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರಶಾಂತ್ ನಾಯಕ್ ಕೃತಿ ಕುರಿತು ಮಾತನಾಡುವರು. ಬರಗೂರು ರಾಮಚಂದ್ರಪ್ಪ ಹಾಗೂ ಬರಗೂರು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಸುಂದರರಾಜ ಅರಸು ಉಸ್ಥಿತರಿರುವರು.
ಸಾಹಿತಿಗಳಾದ ಸರಜೂ ಕಾಟ್ಕರ್, ರವೀಂದ್ರ ನಾಯ್ಕರ್, ಡಿ.ಎಸ್. ಚೌಗಲೆ , ಯಲ್ಲಪ್ಪ ಹಿಮ್ಮಡಿ, ನದೀಮ್ ಸನದಿ, ಶಂಕರ ಬಾಗೇವಾಡಿ, ಜಿ.ವಿ. ಕುಲಕರ್ಣಿ, ಭಾರತಿ ವಿಜಾಪುರೆ, ಗೌತಮ ಪಾಟೀಲ, ಕಲ್ಲಪ್ಪ ಕಾಂಬಳೆ, ಸಿದ್ದಗೌಡ ಮೋದಗಿ, ಜೀವನ ಮಾಂಜ್ರೇಕರ್, ಬಾಲಕೃಷ್ಣ ನಾಯಕ, ಮಹಾದೇವ ತಳವಾರ, ಅಶೋಕ್ ಚಂದರಗಿ ಮತ್ತು ಶಿವಲೀಲಾ ಮಿಸಾಳೆ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.