ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಸಿ ಕ್ರೀಡೆಗಳಲ್ಲಿ ಆಸಕ್ತಿ ಅಗತ್ಯ’

Last Updated 28 ಮಾರ್ಚ್ 2023, 6:13 IST
ಅಕ್ಷರ ಗಾತ್ರ

ಹಂದಿಗುಂದ: ‘ಗ್ರಾಮೀಣ ಮಟ್ಟದ ಕ್ರೀಡಾಪಟುಗಳು ಅಂತರರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು. ಯುವಕರು ದೇಸಿ ಕ್ರೀಡೆಗಳನ್ನು ಹೆಚ್ಚು ಆಡುವುದರ ಮೂಲಕ ಸದೃಢ ದೇಹ ಬೆಳೆಸಿಕೊಳ್ಳಬೇಕು‘ ಎಂದು ಕಂಕಣವಾಡಿ ಪಟ್ಟಣ ಪಂಚಾಯಿತಿ ಸದಸ್ಯ ಮಹಾದೇವ ಗದಾಡಿ ಹೇಳಿದರು.

ಸಮೀಪದ ಕಂಕಣವಾಡಿ ಪಟ್ಟಣದಲ್ಲಿ ಹಾಲಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜೈ ಹನುಮಾನ್‌ ಗ್ರಾಮೀಣ ಅಭಿವೃದ್ಧಿ ಹಾಗೂ ಸಮಾಜ ಸೇವಾ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡ ಅಂತರ್‌ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.

ಜೆಡಿಎಸ್ ಪಕ್ಷದ ಯುವ ನಾಯಕ ಶಿವರಾಜ ಪಾಟೀಲ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಜೆಡಿಎಸ್‌ ಮುಖಂಡ ಪ್ರದೀಪ ಮಾಳಗಿ ಮಾತನಾಡಿದರು.

ಹಾಲ ಸಿದ್ದೇಶ್ವರ ದೇವಋಷಿ ಹಾಲಪ್ಪ ಪೂಜೇರಿ, ಸಿದ್ದಪ್ಪ ಹುಕ್ಕೇರಿ, ಶಶಿಕಾಂತ ದೇಸಾಯಿ, ಸಿದ್ದಪ್ಪ ಪೂಜಾರಿ ಹಾಲಪ್ಪ ಪೂಜಾರಿ, ಪಟ್ಟಣ ಪಂಚಾಯಿತಿ ಸದಸ್ಯ ಕೆ.ಬಿ. ದೇಸಾಯಿ, ಸದಾಶಿವ ನಿಡೋನಿ, ಸತ್ಯಪ್ಪ ಪಿರಗಿ, ಸಂಸ್ಥೆಯ ಅಧ್ಯಕ್ಷ ಹಾಲಪ್ಪ ಹುಕ್ಕೇರಿ, ಶಂಕರ ವಗ್ಗರ, ಅಜಿತ ನಾಯಕವಾಡಿ, ಮಹಾದೇವ ಗೋಡೆರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT