ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಕನ್ನಡದಲ್ಲಿ ನಂಬರ್ ಹಾಕಿದ್ದಕ್ಕೆ ದಂಡ!

Last Updated 24 ಆಗಸ್ಟ್ 2020, 16:15 IST
ಅಕ್ಷರ ಗಾತ್ರ

ಬೆಳಗಾವಿ: ದ್ವಿಚಕ್ರವಾಹನದ ನಂಬರ್‌ ಪ್ಲೇಟ್‌ನಲ್ಲಿ ಅಂಕಿಗಳು ಅಚ್ಚ ಕನ್ನಡದಲ್ಲಿದ್ದ ಕಾರಣಕ್ಕೆ ಸವಾರನಿಗೆ ಇಲ್ಲಿನ ಸಂಚಾರ ಪೊಲೀಸರು ₹ 500 ದಂಡ ವಿಧಿಸಿದ್ದಾರೆ.

‘ಜೀಜಾಮಾತಾ ವೃತ್ತದ ಬಳಿ ಸೋಮವಾರ ಘಟನೆ ನಡೆದಿದೆ. ‘ದೋಷಪೂರಿತ ನಂಬರ್‌ ಪ್ಲೇಟ್’ ಎಂದು ನಮೂದಿಸಿ ದಂಡ ವಿಧಿಸಲಾಗಿದೆ. ನೂರಾರು ಮರಾಠಿ ಯುವಕರು ಕರ್ನಾಟಕ ಮತ್ತು ಕನ್ನಡಿಗರನ್ನು ಕೆಣಕುವ, ಕರ್ನಾಟಕ ವಿರೋಧಿ ಸಂಘಟನೆಗಳ ಘೋಷಣೆಗಳನ್ನು ದ್ವಿಚಕ್ರವಾಹನ ಮತ್ತು ಕಾರುಗಳ ಮೇಲೆ ಬರೆಸಿಕೊಂಡು ರಾಜಾರೋಷವಾಗಿ ಓಡಾಡುತ್ತಿದ್ದಾರೆ' ಎಂದುಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದ್ದಾರೆ

'ಇಂಥ ಎಷ್ಟು ವಾಹನಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ? ಕನ್ನಡದ ಅಂಕಿ ಬರೆದಿದ್ದಕ್ಕೆ ದಂಡ ಹಾಕಿರುವುದು ಹಾಗೂ ಅರ್ಥವಾಗುವುದಿಲ್ಲ ಎಂದು ಸವಾರಗೆ ಹೇಳಿರುವುದು ಖಂಡನೀಯ’ ಎಂದು ತಿಳಿಸಿದ್ದಾರೆ.

‘ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಕನ್ನಡ ಅನುಷ್ಠಾನದ ಹೊಣೆ ಹೊತ್ತಿರುವ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT