ಜಾತಿವಾರು ಅಂದಾಜು ಲೆಕ್ಕಾಚಾರ
ಹುಕ್ಕೇರಿ ಕ್ಷೇತ್ರದಲ್ಲಿ 75 ಸಾವಿರ ಲಿಂಗಾಯತರು 38 ಸಾವಿರ ಪರಿಶಿಷ್ಟರು 30 ಸಾವಿರ ಮರಾಠರು 25 ಸಾವಿರ ಮುಸ್ಲಿಮರು 8 ಸಾವಿರ ಕುರುಬರು ಹಾಗೂ ಇತರೆ ಸಮುದಾಯಗಳ 32 ಸಾವಿರ ಮತದಾರರಿದ್ದಾರೆ. ಕಾಂಗ್ರೆಸ್-ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ಲಿಂಗಾಯತರು. ಅವರು ತಮ್ಮ ಸಮುದಾಯದ ಮತಗಳನ್ನು ಸೆಳೆಯುವ ಜತೆಗೆ ಉಳಿದ ಸಮುದಾಯದವರ ಓಲೈಕೆಗಾಗಿ ಪ್ರಯತ್ನ ಜೋರಾಗಿಸಿದ್ದಾರೆ.