ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ, ಸಂಶೋಧನಾ ಒಪ್ಪಂದಕ್ಕೆ ಸಹಿ

Last Updated 6 ಆಗಸ್ಟ್ 2021, 13:05 IST
ಅಕ್ಷರ ಗಾತ್ರ

ಬೆಳಗಾವಿ: ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇಲ್ಲಿನ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ(ಜಿಐಟಿ) ಹಾಗೂ ಹಾರ್ಡ್‌ಕ್ರೋಮ್‌ ಮತ್ತು ಎಲೆಕ್ಟ್ರೋಲೆಸ್ ಲೇಪನ ಘಟಕ ಗರುಡ್ ಅಲೈಡ್ ಟೆಕ್ನಾಲಜೀಸ್ ಒಡಂಬಡಿಕೆ ಮಾಡಿಕೊಂಡಿವೆ.

ಜಿಐಟಿ ಪರವಾಗಿ ಕರ್ನಾಟಕ ಕಾನೂನು ಸೊಸೈಟಿ ಉಪಾಧ್ಯಕ್ಷ ಮತ್ತು ಕೈಗಾರಿಕೋದ್ಯಮಿ ರಾಮ ಭಂಡಾರೆ ಮತ್ತು ಗರುಡ್ ಅಲೈಡ್ ಟೆಕ್ನಾಲಜೀಸ್ ಪರವಾಗಿ ಸಿಇಒ ಆಶಿಶ್ ಕುಲಕರ್ಣಿ ಒಡಂಬಡಿಕೆಗೆ ಸಹಿ ಹಾಕಿದರು.

ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಸಂಶೋಧನೆ ಸಹಯೋಗ ಉತ್ತೇಜಿಸುವುದು ಈ ಒಡಂಬಡಿಕೆಯ ಮುಖ್ಯ ಉದ್ದೇಶವಾಗಿದೆ. ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪಠ್ಯಕ್ರಮ ವಿನ್ಯಾಸಗೊಳಿಸುವುದು, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುವುದು, ಜಂಟಿಯಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವುದು, ಹೊಸ ಲೇಪನ ತಂತ್ರಜ್ಞಾನಗಳು ಮತ್ತು ತಂತ್ರಜ್ಞಾನಗಳನ್ನು ಕೈಗಾರಿಕೆಗಳಿಗೆ ವರ್ಗಾಯಿಸುವುದು ಈ ಒಡಂಬಡಿಕೆಯ ಉದ್ದೇಶಗಳಾಗಿವೆ.

ಆಡಳಿತ ಮಂಡಳಿ ಸದಸ್ಯರಾದ ರಾಜ ಬೆಳಗಾವಕರ,ಸಚಿನ್ ಪಾರಮಾಜ, ಕೆಎಲ್ಎಸ್ ಜಿಐಟಿಯ ಪ್ರಾಚಾರ್ಯ ಡಾ.ಜಯಂತ ಕೆ ಕಿತ್ತೂರ, ರಸಾಯನವಿಜ್ಞಾನ ವಿಭಾಗದ ಡಾ.ಎಸ್.ವಿ. ದಿವೇಕರ ಮತ್ತು ಡಾ.ಆರ್.ಎಂ. ಕುಲಕರ್ಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT