ಬೆಳಗಾವಿ: ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ದಿನವನ್ನೇ ತಮ್ಮ ಜನ್ಮ ದಿನವನ್ನಾಗಿ ಆಚರಿಸಿಕೊಳ್ಳುತ್ತಿರುವ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಈ ಸಂದರ್ಭದಲ್ಲಿ ಜನರ ಸೇವೆಗೋಸ್ಕರ ಎರಡು ಆಂಬುಲೆನ್ಸ್‌ಗಳನ್ನು ಬುಧವಾರ ಸಮರ್ಪಿಸಿದರು.

‘ಕೊರಿನಾದಿಂದಾಗಿ ಜನರು ಎಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ ಎನ್ನುವ ಅರಿವಿದೆ. ನಾನು ಕೂಡ ಬಹಳಷ್ಟು ನೋವು ಅನುಭವಿಸಿದ್ದೇನೆ. ಆದಷ್ಟು ಬೇಗ ಇಂತಹ ಪರಿಸ್ಥಿತಿಯಿಂದ ಎಲ್ಲರೂ ಪಾರಾಗಲಿ ಎಂದು ಪ್ರಾರ್ಥಿಸುತ್ತೇನೆ. ಕ್ಷೇತ್ರದ ಜನರು ಪಕ್ಷಾತೀತವಾಗಿ ಈ ಎರಡು ಆಂಬುಲೆನ್ಸ್‌ಗಳನ್ನು ಬಳಸಿಕೊಳ್ಳಬೇಕು’ ಎಂದು ಕೋರಿದರು.

‘ಕ್ಷೇತ್ರದ ಜನರು ಹಾಸಿಗೆ, ಚುಚ್ಚುಮದ್ದು, ಆಮ್ಲಜನಕಕ್ಕಾಗಿ ಫೋನ್ ಮಾಡುತ್ತಿದ್ದಾರೆ. ಅವರ ಕಷ್ಟ ನನಗೆ ಅರ್ಥವಾಗುತ್ತದೆ. ನನ್ನ ಕೈಯಿಂದ ಸಾಧ್ಯವಾದಷ್ಟು ನೆರವು ನೀಡುತ್ತಿದ್ದೇನೆ. ಎಲ್ಲರೂ ಜಾಗೃತಿಯಿಂದ ಇರಬೇಕು’ ಎಂದು ಮನವಿ ಮಾಡಿದರು.

ಸಿ.ಸಿ. ಪಾಟೀಲ, ರಾಮನಗೌಡ ಪಾಟೀಲ, ಶ್ರೀಕಾಂತ ಮಾದುಬರಬಣ್ಣವರ, ಬಸನಗೌಡ ಪಾಟೀಲ, ಶಾಮ ಮುತಗೇಕರ, ಬಾಗಣ್ಣ ನರೋಟಿ, ಗಜಾನನ ಕಣಬರ್ಕರ, ಜೈವಂತ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.