ಬುಧವಾರ, ನವೆಂಬರ್ 25, 2020
22 °C

ಕ್ಷೇತ್ರದ ಜನರಲ್ಲೇ ದೇವರನ್ನು ಕಾಣುವೆ: ಲಕ್ಷ್ಮಿ ಹೆಬ್ಬಾಳಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕ್ಷೇತ್ರದ ಜನರ ಆಶೀರ್ವಾದ ಎಲ್ಲಕ್ಕಿಂತ ದೊಡ್ಡದು. ಇದಕ್ಕಿಂತ ಸುದೈವ ಬೇರೆ ಇಲ್ಲ’ ಎಂದು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ಕ್ಷೇತ್ರದ ಅಂಬೇವಾಡಿ ಗ್ರಾಮದಲ್ಲಿ ಮಸಣಾಯಿ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಚುನಾವಣೆಯಲ್ಲಿ ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಗೆಲ್ಲಿಸಿದ್ದೀರಿ. ಮನೆ ಮಗಳಂತೆ ಕಂಡಿದ್ದೀರಿ. ಕ್ಷೇತ್ರದ ಜನರಲ್ಲೇ ನಾನು ದೇವರನ್ನು ಕಾಣುತ್ತೇನೆ’ ಎಂದರು.

‘ಕ್ಷೇತ್ರದ ಪ್ರತಿ ಗ್ರಾಮದಲ್ಲೂ ದೇವಸ್ಥಾನ, ರಸ್ತೆ, ಶಾಲೆಗಳ ನಿರ್ಮಾಣಕ್ಕೆ ಅನುದಾನ ನೀಡುತ್ತಿದ್ದೇನೆ. ಕುಡಿಯುವ ನೀರಿನ ಸೌಲಭ್ಯಕ್ಕೆ ಆದ್ಯತೆ ಕೊಡುತ್ತಿದ್ದೇನೆ. ಇವೆಲ್ಲ ಜನರ ಬದುಕಿನಲ್ಲಿ ನೆಮ್ಮದಿ ನೀಡುವಂತವು. ಕನಿಷ್ಠ ಅಗತ್ಯಗಳನ್ನೂ ಕಲ್ಪಿಸದಿದ್ದರೆ ಜನಪ್ರತಿನಿಧಿಗಳು ಕರ್ತವ್ಯದಿಂದ ಪಲಾಯನ ಮಾಡಿದಂತಾಗುತ್ತದೆ. ನಾನು ಎಂದಿಗೂ ಜನರಿಂದ ದೂರವಾಗುವವಳಲ್ಲ’ ಎಂದರು.

ದೇವಸ್ಥಾನ ಸಮಿತಿಯ ಸದಸ್ಯರು, ಹಿರಿಯರು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಮುಖಂಡರಾದ ಶಿವಾಜಿ ಅತಿವಾಡಕರ, ರೇಮಾಣಿ ತರಳೆ, ಶಿವಾಜಿ ರಾಕ್ಷೆ, ಶಂಕರ ತರಳೆ, ರಾಜು ಕೊಚಾರಿ, ಅಮೋಲ್‌ ಬಾತ್ಕಂಡೆ, ಭರಮಾ ಮನ್ನೋಳಕರ, ಅರುಣ ಬೆಳಗಾಂವಕರ, ಸಂಜು ತರಳೆ, ದೇವಪ್ಪ ಮನ್ನೋಳಕರ, ಶಿವಾಜಿ ಚೌಗುಲೆ, ಬಾಬು ತರಳೆ, ರಾಜು ತರಳೆ, ಅಶೋಕ ಯಳಗುಕರ, ಪಿ.ಡಿ. ಕೋಲಕಾರ, ಪರುಶರಾಮ ತರಳೆ, ಮಾರುತಿ ಕಾಕತಕರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು