ಚಿಕ್ಕೋಡಿ: ಪಟ್ಟಣದಲ್ಲಿ ಕೋಟ್ಯಂತರ ಮೊತ್ತದಲ್ಲಿ ಹತ್ತಾರು ಸರ್ಕಾರಿ ಕಟ್ಟಡಗಳು ಪೂರ್ಣಗೊಂಡು ಹಲವು ತಿಂಗಳು ಕಳೆದಿವೆ. ಆದರೆ ಅವುಗಳ ಉದ್ಘಾಟನೆಗೆ ಕಾಲ ಕೂಡಿ ಬಾರದಿರುವುದು ಸಾರ್ವಜನಿಕರಿಗೆ ಹಾಗೂ ನೌಕರರಿಗೆ ತೀವ್ರ ನಿರಾಶೆ ಮೂಡಿಸಿದೆ. ಅದರಲ್ಲೂ ಓದುಗರಿಗೆ ಜ್ಞಾನಧಾರೆ ಎರೆಯುವ ಸಾರ್ವಜನಿಕ ಗ್ರಂಥಾಲಯ, ಹಸಿದ ಹೊಟ್ಟೆಗಳಿಗೆ ಅನ್ನ ಹಾಕಬೇಕಿದ್ದ ಇಂದಿರಾ ಕ್ಯಾಂಟಿನ್ ಉದ್ಘಾಟನೆಗೊಳ್ಳದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಪಟ್ಟಣದ ಹಳೆಯ ಪುರಸಭೆ ಕಚೇರಿಗೆ ಹೊಂದಿಕೊಂಡು ಶಿಥಿಲಾವಸ್ಥೆಯಲ್ಲಿದ್ದ ಗ್ರಂಥಾಲಯದ ಹಳೆಯ ಕಟ್ಟಡವನ್ನು ಕೆಡವಿ, ಅದೇ ಸ್ಥಳದಲ್ಲಿ ₹ 40 ಲಕ್ಷ ಮೊತ್ತದಲ್ಲಿ ಸಾರ್ವಜನಿಕ ಗ್ರಂಥಾಲಯ ತಲೆ ಎತ್ತಿನಿಂತು 6-7 ತಿಂಗಳು ಕಳೆದಿವೆ. ಗ್ರಂಥಾಲಯ ಕಟ್ಟಡ ನಿರ್ಮಾಣದ ಹಿನ್ನೆಲೆಯಲ್ಲಿ ಕಳೆದ 2-3 ವರ್ಷಗಳಿಂದ ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಎರಡು ಕೊಠಡಿಗಳನ್ನು ಬಳಸಿಕೊಂಡು ಗ್ರಂಥಾಲಯವನ್ನು ತಾತ್ಕಾಲಿಕವಾಗಿ ನಿರ್ವಹಣೆ ಮಾಡಲಾಗುತ್ತಿದೆ.

ಇನ್ನೇನು ಗ್ರಂಥಾಲಯ ಕಟ್ಟಡ ಕಾಮಗಾರಿ ಪೂರ್ಣಗೊಂಡು, ಸುಣ್ಣ ಬಣ್ಣವೂ ಆಗಿದ್ದರಿಂದ 40 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ನೂತನ ಕಟ್ಟಡಕ್ಕೆ ಗ್ರಂಥಪಾಲಕರು ಜುಲೈ - ಆಗಸ್ಟ್ ತಿಂಗಳಲ್ಲಿಯೇ ಸ್ಥಳಾಂತರಿಸಿದ್ದಾರೆ. ಹೀಗಾಗಿ ಕಳೆದ 5-6 ತಿಂಗಳಿನಿಂದ ಗ್ರಂಥಗಳನ್ನು ಎರವಲು ಪಡೆದುಕೊಳ್ಳಲಾಗದೇ, ಓದಲು ಆಗದ ಉಭಯ ಸಂಕಟವನ್ಜು ಓದುಗರು ಎದುರಿಸುತ್ತಿದ್ದಾರೆ.

ಈಗಾಗಲೇ ಸರ್ಕಾರಿ ಶಾಲೆಯಲ್ಲಿ ತರಗತಿ ಕೋಣೆಗಳ ಕೊರತೆಯಿದ್ದು, ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ ಎಂಬ ಒತ್ತಡ ಶಾಲಾ ಎಸ್ಡಿಎಂಸಿಯದಾಗಿದೆ. ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಕೆಲವೊಂದಿಷ್ಟು ಪುಸ್ತಕಗಳನ್ನು ಮೂಟೆ ಕಟ್ಟಿ ಶಾಲಾ ಕೊಠಡಿಗಳಲ್ಲಿ ಇರಿಸಲಾಗಿದೆ. ಓದುಗರ ಕೈ ಸೇರಬೇಕಿದ್ದ ಸಹಸ್ರಾರು ಪುಸ್ತಕಗಳು ಹಲವು ದಿನಗಳಿಂದ ಮೂಟೆಗಳಲ್ಲಿ ಬಂಧಿಯಾಗಿವೆ.

ಇನ್ನು, ಹಸಿದ ಹೊಟ್ಟೆಗಳಿಗೆ ಅನ್ನಹಾಕಬೇಕೆಂಬ ಮಹತ್ತರವಾದ ಉದ್ದೇಶದಿಂದ ಪಟ್ಟಣದಲ್ಲಿ ಬಿಇಒ ಕಚೇರಿ ಆವರಣದಲ್ಲೊಂದು ಹಾಗೂ ಹೆಸ್ಕಾಂ ಕಚೇರಿ ಆವರಣದಲ್ಲೊಂದು ಹೀಗೆ ಎರಡು ಇಂದಿರಾ ಕ್ಯಾಂಟಿನ್ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕ್ಯಾಂಟಿನ್ ನಿರ್ಮಾಣ ಕಾರ್ಯ ಪೂರ್ಣಗೊಂಡು 3-4 ತಿಂಗಳಾಯಿತು. ಇದುವರೆಗೂ ಕ್ಯಾಂಟಿನ್ ಕಾರ್ಯಾರಂಭ ಮಾಡದಿರುವುದರಿಂದ ಹಸಿದ ಹೊಟ್ಟೆಗಳಿಗೆ ತುತ್ತು ನೀಡುವ ಕಾರ್ಯ ನಡೆಯದಿರುವುದು ಸಾರ್ವಜನಿಕರ ನಿರಾಶೆಗೆ ಕಾರಣವಾಗಿದೆ.

ನೂತನ ಕಟ್ಟಡಕ್ಕೆ ಪುಸ್ತಕಗಳನ್ನು ಸ್ಥಳಾಂತರಿಸುವ ಕಾರ್ಯಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ಗ್ರಂಥಾಲಯದ ನೂತನ ಕಟ್ಟಡ ಲೋಕಾರ್ಪಣೆ ಸಾಧ್ಯತೆ ಇದೆ
ವಸಂತ ಚಿತ್ರಗಾರ ಸಾರ್ವಜನಿಕ ಗ್ರಂಥಾಲಯ ಗ್ರಂಥಪಾಲಕರು

ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟಿನ್ ನಿರ್ಮಾಣ ಕಾರ್ಯಪೂರ್ಣಗೊಂಡಿದ್ದು ನೀರು ಹಾಗೂ ವಿದ್ಯುತ್ ಸಂಪರ್ಕ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿದೆ
ಜಗದೀಶ ಈಟಿ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.