ಶನಿವಾರ, ಸೆಪ್ಟೆಂಬರ್ 19, 2020
27 °C

₹ 10 ಲಕ್ಷ ಮೌಲ್ಯದ ಮದ್ಯ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರ ಕಡೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ₹ 10 ಲಕ್ಷ ಮೌಲ್ಯದ ಮದ್ಯ (350 ಬಾಕ್ಸ್‌ ಗೋವಾ ಮದ್ಯ), ₹ 15 ಲಕ್ಷ ಮೌಲ್ಯದ ಕಾರು ಮತ್ತು ಲಾರಿಯನ್ನು ಅಬಕಾರಿ ಪೊಲೀಸರು ಶುಕ್ರವಾರ ವಿಟಿಯು ಸಮೀಪದಲ್ಲಿ ತಡೆದು ವಶಪಡಿಸಿಕೊಂಡಿದ್ದಾರೆ. ನಾಲ್ವರನ್ನು ಬಂಧಿಸಲಾಗಿದೆ.

ಮಹಾರಾಷ್ಟ್ರದ ಸಿಂಧುದುರ್ಗದವರಾದ ಪ್ರದೀಪ ಪಾಟೀಲ, ಮಿತಿಲೇಶ್ ಸುಕಿ ಹಾಗೂ ಶುಭಂ ಸಿತೋಳೆ ಹಾಗೂ ಬೆಳಗಾವಿಯ ಯಲ್ಲಪ್ಪ ಪಾಟೀಲ ಬಂಧಿತ ಆರೋಪಿಗಳು. ಇಬ್ಬರು ಕಾರಿನಲ್ಲಿ ಹಾಗೂ ಇಬ್ಬರು ಲಾರಿಯಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎಂದು ಅಬಕಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

‌ಜಂಟಿ ಆಯುಕ್ತ ವೈ. ಮಂಜುನಾಥ, ಉಪ ಆಯುಕ್ತ ಅರುಣ್‌ಕುಮಾರ್‌ ನೇತೃತ್ವದಲ್ಲಿ ಉಪ ಅಧೀಕ್ಷಕ ವಿಜಯಕುಮಾರ್ ಹಿರೇಮಠ, ಇನ್‌ಸ್ಪೆಕ್ಟರ್‌ಗಳಾದ ಲಿಂಗರಾಜ, ರವೀಂದ್ರ ಹೊಸಳ್ಳಿ ಹಾಗೂ ವಿಶ್ವನಾಥ ಗಾಣಿಗೇರ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು