ಸೋಮವಾರ, ಜುಲೈ 13, 2020
29 °C

ಬೆಳಗಾವಿ | ಲೇಖಕಿಯರ ಸಂಘದಿಂದ ಸಾಹಿತ್ಯ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕೋವಿಡ್–19 ಲಾಕ್‌ಡೌನ್‌ ಬಿಡುವಿನಲ್ಲಿ ಜಿಲ್ಲಾ ಲೇಖಕಿಯರ ಸಂಘದಿಂದ ‘ಸಾಹಿತ್ಯಿ ಅಭಿಯಾನ’ದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು’ ಎಂದು ಅಧ್ಯಕ್ಷೆ ಜ್ಯೋತಿ ಬದಾಮಿ ತಿಳಿಸಿದ್ದಾರೆ.

‘ಮಿನಿ ಕಥಾ ಸ್ಪರ್ಧೆಯನ್ನು ವಾಟ್ಸ್‌ಆ್ಯಪ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. 40 ಸದಸ್ಯರು ಪಾಲ್ಗೊಂಡರು. 10 ಸಾಲಿನ ಕಥೆಯಲ್ಲಿ ಮನಕಲಕುವ ಘಟನೆಗಳಿಗೆ ಅವರು ಮೂರ್ತ ರೂಪ ನೀಡಿದ್ದು ವಿಶೇಷವಾಗಿತ್ತು. ಹತ್ತು ವಿಜೇತರನ್ನು ಆಯ್ಕೆ ಮಾಡಲಾಯಿತು. ಪುಸ್ತಕ ಅಭಿಯಾನ ವಿಡಿಯೊ ಕಾರ್ಯಕ್ರಮದಲ್ಲಿ 60 ಮಂದಿ ಭಾಗವಹಿಸಿದ್ದರು. ತಮ್ಮ ಅಭಿರುಚಿಯ ಪುಸ್ತಕಗಳನ್ನು ಓದಲು ಪ್ರೇರೇಪಿಸಿದರು. ‘ಅಮ್ಮ’ ವಿಷಯದ ಕುರಿತು ವಿಡಿಯೊ ಚುಟುಕು ವಾಚನ ಅಭಿಯಾನ ಅಮ್ಮನ ಮಧುರ ನೆನಪುಗಳನ್ನು ಮರುಕಳಿಸುವಂತೆ ಮಾಡಿತು. ತಾಯಂದಿರ ಫೋಟೊಗಳನ್ನು  ಅವರು ಹಂಚಿಕೊಂಡರು’ ಎಂದು ಮಾಹಿತಿ ನೀಡಿದ್ದಾರೆ.

‘ಈ ವಿನೂತನ ಅಭಿಯಾನಕ್ಕೆ ಆಶಾ, ರಾಜನಂದಾ ಗಾರ್ಗಿ ಸಹಕಾರ ನೀಡಿದರು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.