ಬೆಳಗಾವಿ: ಮಲಪ್ರಭಾ ಉಗಮಸ್ಥಳವಾಗಿರುವ ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಎಡಬಿಡದೆ ಸುರಿಯುತ್ತಿದ್ದು, ದಿನದ 24 ಗಂಟೆಗಳಲ್ಲಿ 335 ಮಿ.ಮೀ ಮಳೆಯಾಗಿದೆ. ನದಿ ಜಲಾನಯನ ಪ್ರದೇಶದ ಹಳ್ಳ– ಕೊಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ಕಳಸಾ– ಬಂಡೂರಿ ನಾಲಾಗಳೂ ಭರ್ತಿಯಾಗಿ ಹರಿಯುತ್ತಿವೆ.

ಪಶ್ಚಿಮ ಘಟ್ಟ ಪ್ರದೇಶದಿಂದ ಆವೃತವಾಗಿರುವ ಜಾಂಬೋಟಿಯಲ್ಲಿ 228 ಮಿ.ಮೀ ಮಳೆಯಾಗಿದೆ. ಪಕ್ಕದ ಅಸೋಗಾದಲ್ಲಿ 211 ಮಿ.ಮೀ, ನಾಗರಗಾಳಿಯಲ್ಲಿ 206 ಮಿ.ಮೀ, ಲೋಂಡಾದಲ್ಲಿ 191 ಮಿ.ಮೀ, ಖಾನಾಪುರದಲ್ಲಿ 172 ಮಿ.ಮೀ ಸೇರಿದಂತೆ ಒಟ್ಟು ಖಾನಾಪುರದಲ್ಲಿ 1,944 ಮಿ.ಮೀ ಮಳೆಯಾಗಿದೆ.

ಮಲಪ್ರಭಾ ನದಿ ಹರಿಯುವ ಎಂ.ಕೆ. ಹುಬ್ಬಳ್ಳಿಯಲ್ಲಿ 132 ಮಿ.ಮೀ ಮಳೆಯಾಗಿದ್ದು, ನೀರಿನ ಹರಿವನ್ನು ಇನ್ನಷ್ಟು ಹೆಚ್ಚಿಸಿದೆ. ಒಂದೇ ದಿನದಲ್ಲಿ 39,992 ಕ್ಯುಸೆಕ್ ನೀರು ನವಿಲುತೀರ್ಥ ಜಲಾಶಯ ಸೇರಿದೆ.

ಬೆಳಗಾವಿ ತಾಲ್ಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, 1,454 ಮಿ.ಮೀ ಮಳೆಯಾಗಿದೆ. ಬೆಳಗಾವಿಯಲ್ಲಿ 136 ಮಿ.ಮೀ ಮಳೆಯಾಗಿದ್ದರೆ, ನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯವಿರುವ ಪ್ರದೇಶದಲ್ಲಿ 182 ಮಿ.ಮೀ ಮಳೆಯಾಗಿದೆ. ತಾಲ್ಲೂಕಿನಲ್ಲಿ ಹರಿಯುವ ಮಾರ್ಕಂಡೇಯ ನದಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದೆ. ಹುಕ್ಕೇರಿ ತಾಲ್ಲೂಕಿನ ಬುಗಟೆಆಲೂರದಲ್ಲಿ 163 ಮಿ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.