ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧ: ಗಡಿಯಾಚೆ ಮಹಾ ಮೇಳಾವ್‌

Published 3 ಡಿಸೆಂಬರ್ 2023, 19:22 IST
Last Updated 3 ಡಿಸೆಂಬರ್ 2023, 19:22 IST
ಅಕ್ಷರ ಗಾತ್ರ

ಬೆಳಗಾವಿ: ಚಳಿಗಾಲದ ಅಧಿವೇಶನಕ್ಕೆ ವಿಘ್ನ ತರಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಆಯೋಜಿಸಿದ್ದ ಮಹಾಮೇಳಾವ್‌ಗೆ ಜಿಲ್ಲಾಡಳಿತ ತಡೆಯೊಡ್ಡಿದೆ. ಸಮಾವೇಶ ನಡೆಸಲುದ್ದೇಶಿದ್ದ ಕಡೆ ನಿಷೇಧಾಜ್ಞೆ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಗಡಿಯಾಚೆ, ಮಹಾರಾಷ್ಟ್ರದ ಶಿನ್ನೋಳಿಯಲ್ಲಿ ಸಮಾವೇಶ ಮಾಡಲು ಎಂಇಎಸ್‌ ಮುಖಂಡರು ನಿರ್ಧರಿಸಿದ್ದಾರೆ.

ಪ್ರತಿಬಾರಿಯಂತೆ, ಅಧಿವೇಶನ ಸಂದರ್ಭದಲ್ಲಿ ಮಹಾಮೇಳಾವ್‌ ನಡೆಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದರೂ ಸಮಾವೇಶ ಮಾಡಿಯೇ ಸಿದ್ಧ ಎಂದು ಎಂಇಎಸ್‌ ಮುಖಂಡರು ಹಟ ಹಿಡಿದರು.

ಡಿ.4ರಂದು ನಗರದ ವ್ಯಾಕ್ಸಿನ್‌ ಡಿಪೊದಲ್ಲಿ ಸಮಾವೇಶಕ್ಕೆ ಸಿದ್ಧತೆ ನಡೆದಿತ್ತು. ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದ ಬಳಿಕನಗರದ ಬೇರೆಡೆ ಸಮಾವೇಶಕ್ಕೆ ಎಂಇಎಸ್‌ ಸಿದ್ಧತೆ ನಡೆಸಿತ್ತು. ಸುಳಿವು ಪಡೆದ ಜಿಲ್ಲಾಡಳಿತ ನಗರದೆಲ್ಲೆಡೆ ನಿಷೇಧ ಜಾರಿ ಮಾಡಿದೆ.

‘ಶಾಂತಿ– ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮಹಾಮೇಳಾವ್‌ಗೆ ಅವಕಾಶ ನೀಡುವುದಿಲ್ಲ’ ಎಂದು ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌.ಸಿದ್ರಾಮಪ್ಪ ತಿಳಿಸಿದ್ದಾರೆ.

‘ಕರ್ನಾಟಕದ ಆಚೆ ಮಹಾರಾಷ್ಟ್ರ ಗಡಿಯಲ್ಲಿರುವ ಶಿನ್ನೋಳಿಯಲ್ಲಿ ಮಹಾ ಮೇಳಾವ್‌ ಮಾಡಲಾಗುವುದು. ಅಲ್ಲಿ ಅನುಮತಿ ಸಿಕ್ಕಿದೆ. ಮಹಾರಾಷ್ಟ್ರದ ಹಲವು ನಾಯಕರೂ ಪಾಲ್ಗೊಳ್ಳಲಿದ್ದಾರೆ’ ಎಂದು ಎಂಇಎಸ್‌ ಮುಖಂಡರು ಮಾಹಿತಿ ನೀಡಿದ್ದಾರೆ.

ಪೊಲೀಸರೊಂದಿಗೆ ಮಾತಿನ ಚಕಮಕಿ: ವ್ಯಾಕ್ಸಿನ್‌ ಡಿಪೊ ಮೈದಾನದಲ್ಲಿ ಭಾನುವಾರ ಬೆಳಿಗ್ಗೆ ಮಹಾ ಮೇಳಾವ್‌ಗೆ ಸಿದ್ಧತೆಗೆ ಎಸಿಪಿ ನಾರಾಯಣ ಭರಮನಿ ಹಾಗೂ ಅಧಿಕಾರಿಗಳು ತಡೆಯೊಡ್ಡಿದರು. ಆಗ ಎಂಇಎಸ್‌ ಮುಖಂಡರಾದ ಮನೋಹರ ಕಿಣೇಕರ್, ರಾಜಾಬಾವು ಪಾಟೀಲ ಇತರರು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ನಿಷೇಧಾಜ್ಞೆ ಮಾಹಿತಿ ನೀಡಿದ ಬಳಿಕ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT