ಗುರುವಾರ , ನವೆಂಬರ್ 21, 2019
20 °C

ಉದ್ಯಮಿಗಳ ಜೊತೆ ಸಚಿವ ಜಗದೀಶ ಶೆಟ್ಟರ್‌ ಸಂವಾದ ಇಂದು

Published:
Updated:

ಬೆಳಗಾವಿ: ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು ಕೈಗಾರಿಕೆ ಸ್ಥಾಪಿಸುವ ಸಂಬಂಧ ಉದ್ಯಮಿಗಳ ಜೊತೆ ಇಲ್ಲಿಗೆ ಸಮೀಪದ ಕಾಕತಿಯಲ್ಲಿರುವ ಫೇರ್‌ಫೀಲ್ಡ್‌ ಮೆರಿಯಟ್‌ ಹೋಟೆಲ್‌ನಲ್ಲಿ ಇದೇ 11ರಂದು ಬೆಳಿಗ್ಗೆ 10.30ಕ್ಕೆ ಸಂವಾದ ನಡೆಸಲಿದ್ದಾರೆ.

ರಾಜ್ಯದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವ ಕುರಿತು ಸಂವಾದ ನಡೆಸಲಿದ್ದಾರೆ. ವಾಣಿಜ್ಯ ಮತ್ತು ಕೈಗಾರಿಕೆ  ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತ, ಆಯುಕ್ತ ಗುಂಜನ್ ಕೃಷ್ಣ, ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಬಸವರಾಜೇಂದ್ರ, ಕ.ರಾ.ಸ.ಕೈ.ಅ.ನಿ. ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಿ. ಶಿರೂರ್  ಇತರರು ಭಾಗವಹಿಸಲಿದ್ದಾರೆ.

ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕಣಗಲಾ ಗ್ರಾಮಕ್ಕೆ ಹೊಂದಿಕೊಂಡಂತೆ 818 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ದಿ ಪಡಿಸಲಾಗುತ್ತಿದೆ. ಕಿತ್ತೂರು ತಾಲ್ಲೂಕಿನಲ್ಲಿ 433 ಎಕರೆ ಜಮೀನನ್ನು ಕೆ.ಐ.ಎ.ಡಿ.ಬಿ. ಇವರ
ಮುಖಾಂತರ ಅಭಿವೃದ್ದಿ ಪಡಿಸಲಾಗಿದ್ದು ಕೈಗಾರಿಕಾ ನಿವೇಶನಗಳು ಹಂಚಿಕೆಗೆ ಲಭ್ಯವಿವೆ. ಇಲ್ಲಿ ಹೂಡಿಕೆ ಮಾಡಲು ಉದ್ಯಮಿಗಳನ್ನು ಸೆಳೆಯುವ ಸಂಬಂಧ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)