ಪೊಲೀಸ್ ಜಾಲತಾಣದಲ್ಲಿ ಹಲವು ತಪ್ಪುಗಳು!

ಬೆಳಗಾವಿ: ಇಲ್ಲಿನ ಪೊಲೀಸ್ ಆಯುಕ್ತಾಲಯದ ಜಾಲತಾಣವನ್ನು (https://www.belagavicitypolice.in) ಗುರುವಾರ ಕನ್ನಡದಲ್ಲಿ ರೂಪಿಸಲಾಗಿದೆ.
ಈ ಜಾಲತಾಣವು ಸಂಪೂರ್ಣವಾಗಿ ಇಂಗ್ಲಿಷ್ನಲ್ಲಿರುವುದಕ್ಕೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. 15 ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು. ಕನ್ನಡ ಮುಖಪುಟದ ಭಾಷೆಯಾಗಿರಬೇಕು. ಇಂಗ್ಲಿಷ್ ಆಯ್ಕೆಯ ಭಾಷೆಯಾಗಿರಬೇಕು ಎಂದು ತಿಳಿಸಿದ್ದರು.
ಇದರಿಂದ ಎಚ್ಚೆತ್ತ ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ ಕ್ರಮ ಕೈಗೊಂಡು, ಒಂದೇ ದಿನದಲ್ಲಿ ಜಾಲತಾಣದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವಂತೆ ಮಾಡಿಸಿದ್ದಾರೆ. ಇದಕ್ಕಾಗಿ ಅವರನ್ನು ಅಧ್ಯಕ್ಷರು ಅಭಿನಂದಿಸಿದ್ದಾರೆ.
ಆದರೆ, ಈ ಜಾಲತಾಣದ ಮುಖಪುಟದಲ್ಲಿಯೇ ಹಲವು ತಪ್ಪುಗಳಿವೆ. ಪೊಲೀಸ (ಪೊಲೀಸ್), ಬೇಗಾ (ಬೇಗ), ಕೋಮುಸೌಹಾರ್ಧ್ಯತೆ (ಕೋಮುಸೌಹಾರ್ದ), ವಿರೋದಿ (ವಿರೋಧಿ), ಧೃಡವಾಡ (ದೃಢವಾದ), ನಿರ್ಬೀತಿ (ನಿರ್ಭೀತಿಯಿಂದ), ಶೊಷಿತ (ಶೋಷಿತ), ಪ್ರಿತಿಯಿಂದ (ಪ್ರೀತಿಯಿಂದ)... ಹೀಗೆ ಹಲವು ತಪ್ಪುಗಳಿವೆ. ವಾಕ್ಯ ರಚನೆಯಲ್ಲೂ ದೋಷಗಳಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.