ಗುರುವಾರ , ಡಿಸೆಂಬರ್ 2, 2021
20 °C

‘ಮಾದರಿ ಕ್ಷೇತ್ರವಾಗಿಸಲು ಶಾಸಕರ ಪಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಅತ್ಯಂತ ಸುಸಂಸ್ಕೃತರ, ದೈವ ಭಕ್ತರ ಕ್ಷೇತ್ರವಾಗಿದೆ. ಇಲ್ಲಿ ಸೇವೆ ಸಲ್ಲಿಸುವ ಅವಕಾಶ ಸಹೋದರಿ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಮತ್ತು ನಮಗೆ ಸಿಕ್ಕಿದ್ದು ಸುದೈವ’ ಎಂದು ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಹೇಳಿದರು.

ತಾಲ್ಲೂಕಿನ ಸಾಂಬ್ರಾ ಗ್ರಾಮದ ಲಕ್ಷ್ಮಿ ನಗರ 2ನೇ‌ ಕ್ರಾಸ್‌ನಲ್ಲಿ ಸೋಮವಾರ ಹೊಲಈರಪ್ಪ ಮತ್ತು ಸಣ್ಣಈರಪ್ಪ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕ್ಷೇತ್ರದ ಬಹುತೇಕ ಎಲ್ಲ ಗ್ರಾಮಗಳಲ್ಲಿ ದೇವಸ್ಥಾನಗಳಿವೆ. ಇಲ್ಲದಿರುವಲ್ಲಿ ಹೊಸ ದೇವಸ್ಥಾನ ನಿರ್ಮಾಣಕ್ಕೆ, ಈಗಾಗಲೆ ಇರುವಲ್ಲಿ ಜೀರ್ಣೋದ್ಧಾರಕ್ಕೆ ಶಾಸಕರ ನಿಧಿಯಿಂದ ಮತ್ತು ಸ್ವಂತ ನಿಧಿಯಿಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಅನುದಾನ ನೀಡಿದ್ದಾರೆ. ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರವನ್ನು ಜನರು ನೀಡುತ್ತಿದ್ದಾರೆ. ಇದು ಖುಷಿ ತಂದಿದೆ. ಇನ್ನಷ್ಟು ಯೋಜನೆಗಳನ್ನು ಕ್ಷೇತ್ರಕ್ಕೆ ತರಲು ಎಲ್ಲರ ಪ್ರೋತ್ಸಾಹ ಸಿಗುತ್ತಿದೆ’ ಎಂದರು.

‘ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿಯನ್ನಾಗಿ ಮಾಡಲು ಶಾಸಕರು ಪಣತೊಟ್ಟಿದ್ದಾರೆ. ಇನ್ನೂ ಹಲವಾರು ಯೋಜನೆಗಳನ್ನು ತರುವ ಕನಸು ಅವರಲ್ಲಿದೆ. ಇದಕ್ಕೆ ಎಲ್ಲರ ಸಹಕಾರ ಮುಂದುವರಿಯಲಿ’ ಎಂದು ಕೋರಿದರು.

ನಾಗೇಶ ದೇಸಾಯಿ, ಮಲ್ಲೇಶ ಚೌಗುಲೆ, ಬಸವರಾಜ ತಾನಾಜಿ, ಸಿದ್ದಪ್ಪ ಕಾಂಬಳೆ, ಕಲ್ಲಪ್ಪ ರಾಮಚನ್ನವರ, ಜಿ.ಐ. ಬರಗಿ, ಮಲ್ಲಪ್ಪ ಕಾಂಬಳೆ, ರಂಜನಾ ಅಪ್ಪಯಾಚೆ, ಕಲ್ಲವ್ವ ಕರೇಗಾರ, ನಿತಿನ ದೇಸಾಯಿ, ಪ್ರವೀಣ ಮಾನೆ, ಮಾರುತಿ ಹಂಚಿನಮನಿ, ಪ್ರವೀಣ ನಾಗಣ್ಣವರ, ಶಿವರಾಯ ಕೋಲಕಾರ, ಶಶಿಕಾಂತ ಮೇತ್ರಿ, ಮಾರುತಿ ಹಂಚಿನಮನಿ, ಯಲ್ಲೇಶ ಕಾಂಬಳೆ, ಬಾಬು ಕೋಲಕಾರ, ರಾಜು ಕರೇಲಕರ, ದಶರಥ ನಾಗಣ್ಣವರ, ವಿರುಪಾಕ್ಷಿ ಕೋಲಕಾರ, ಸಚಿನ ನಾಗಣ್ಣವರ, ಉಮೇಶ ಮೇತ್ರಿ, ಸಿದ್ದವೀರ ಕೋಲಕಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.