ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ| ಜಲಪಾತಗಳಿಗೆ ಜೀವಕಳೆ ತಂದ ಮುಂಗಾರು ಮಳೆ

Published 22 ಜೂನ್ 2023, 14:13 IST
Last Updated 22 ಜೂನ್ 2023, 14:13 IST
ಅಕ್ಷರ ಗಾತ್ರ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮುರಗೋಡ, ಸೊಗಲ, ಕಾರಿಮನಿ, ಹೊಸೂರ ಗ್ರಾಮಗಳ ಸುತ್ತಮುತ್ತ ಗುರುವಾರ ಧಾರಾಕಾರ ಮಳೆ ಸುರಿಯಿತು. ತಾಸಿಗೂ ಹೆಚ್ಚು ಸಮಯ ಸುರಿದ ಮಳೆಯಿಂದ‌ ಹಳ್ಳ, ಕಾಲುವೆ, ಚರಂಡಿಗಳು ತುಂಬಿ ಹರಿದವು.

ದಕ್ಷಿಣ ಕಾಶಿ ಎಂದೇ ಹೆಸರಾದ ಸೊಗಲ ಸೋಮೇಶ್ವರ ಕ್ಷೇತ್ರದ ಎರಡು ಜಲಪಾತಗಳಿಗೆ ಮತತೆ ಜೀವಕಳೆ ಬಂದಿತು. ದಟ್ಟ ಹಸಿರಿನ ಮಧ್ಯೆ ಹರಿದ ನೀರು ಜಲಪಾತಗಳಲ್ಲಿ ಭೋರ್ಗರೆಯಿತು. ದೇವಸ್ಥಾನದ ಕಿರು ಕಾಲುವೆಗಳೂ ತುಂಬಿದವು.

ಕ್ಷೇತ್ರದ ಸುತ್ತ ಇರುವ ಕಾಡು ಒಣಗಿದ್ದು, ನೀರಿನ ಅಭಾವದಿಂದ ವನ್ಯಮೃಗಗಳು ಪರಿತಪಿಸುವಂತಾಗಿತ್ತು. ಏಕಾಏಕಿ ಸುರಿದ ಮಳೆ ಕಾಡಿನ ಜೀವಗಳಿಗೆ ಹರ್ಷ ತಂದಿತು.

ಕೆಲವು ಗ್ರಾಮಗಳಲ್ಲಿ ಬಿರಿಗಾಳಿಗೆ ಹಲವು ಕಡೆ ವಿದ್ಯುತ್ ಕಂಬಗಳ ವಾಲಿದವು. ಜಮೀನುಗಳಲ್ಲಿ ಮಳೆ ನೀರು ನಿಂತು ಒಡ್ಡು ಒಡೆದವು. ಮಳೆ ಇಲ್ಲದೆ ಚಡಪಡಿಸುತ್ತಿದ್ದ ರೈತರಿಗೆ ಭರವಸೆ ಮೂಡಿತು.

ಕಾರವಾರ ವರದಿ: ಜಿಲ್ಲೆಯ ಕರಾವಳಿಯೂ ಸೇರಿದಂತೆ ಮಲೆನಾಡಿನ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಕಾರವಾರ, ಕುಮಟಾ, ಹೊನ್ನಾವರದಲ್ಲಿ ಮಧ್ಯಾಹ್ನದ ಹೊತ್ತಿಗೆ ಎಡೆಬಿಡದೆ ಕೆಲ ಹೊತ್ತು ಮಳೆ ಸುರಿಯಿತು. ಯಲ್ಲಾಪುರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿಯೂ ಮಳೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT