ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಅ.3ರಿಂದ ನಾಡಹಬ್ಬ ಉತ್ಸವ

Published : 1 ಅಕ್ಟೋಬರ್ 2024, 12:30 IST
Last Updated : 1 ಅಕ್ಟೋಬರ್ 2024, 12:30 IST
ಫಾಲೋ ಮಾಡಿ
Comments

ಬೆಳಗಾವಿ: ‘ಇಲ್ಲಿನ ಕನ್ನಡ ಸಾಹಿತ್ಯ ಭವನ ಪ್ರಾಂಗಣದಲ್ಲಿ ಅ.3ರಿಂದ 7ರವರೆಗೆ 97ನೇ ನಾಡಹಬ್ಬ ಉತ್ಸವ ಆಚರಿಸಲಾಗುವುದು’ ಎಂದು ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಡಾ.ಎಚ್‌.ಬಿ.ರಾಜಶೇಖರ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಡಿಯಲ್ಲಿ ಕನ್ನಡ ಕಟ್ಟಿ ಬೆಳೆಸುವ ಉದ್ದೇಶದಿಂದ 1927ರಿಂದ ಬೆಳಗಾವಿಯಲ್ಲಿ ನಾಡಹಬ್ಬ ಉತ್ಸವ ಆಚರಿಸುತ್ತ ಬಂದಿದ್ದೇವೆ. ಈ ಬಾರಿಯೂ ಅದ್ದೂರಿಯಾಗಿ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಕೆ.ಜೋರಾಪುರ, ‘3ರಂದು ಸಂಜೆ 6ಕ್ಕೆ ಸಂಸದ ಜಗದೀಶ ಶೆಟ್ಟರ್‌ ಉದ್ಘಾಟಿಸುವರು. ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಯಾಗಿ ಶಾಸಕ ಆಸೀಫ್‌ ಸೇಠ್‌ ಆಗಮಿಸುವರು. ಮಾಜಿ ಸಂಸದೆ ಮಂಗಲಾ ಅಂಗಡಿ ಅಧ್ಯಕ್ಷತೆ ವಹಿಸುವರು. ಬಿ.ಎಸ್‌.ಗವಿಮಠ ಉಪನ್ಯಾಸ ನೀಡುವರು’ ಎಂದು ತಿಳಿಸಿದರು.

‘2ರಂದು ಸಂಜೆ 6ಕ್ಕೆ ‘ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಸವಿನೆನಪು’ ಕಾರ್ಯಕ್ರಮ ನಡೆಯಲಿದೆ. ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅತಿಥಿಯಾಗಿ ಡಿ.ಸಿ ಮೊಹಮ್ಮದ್‌ ರೋಷನ್‌ ಆಗಮಿಸುವರು. ಎಲ್‌.ಎಸ್‌.ಶಾಸ್ತ್ರಿ ಅಧ್ಯಕ್ಷತೆ ವಹಿಸುವರು. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರನ್ನು ಸನ್ಮಾನಿಸಲಾಗುವುದು. 5ರಂದು ಸಂಜೆ 6ಕ್ಕೆ ನಡೆಯಲಿರುವ ‘ಜಾಗತಿಕ ವಿದ್ಯಮಾನಗಳು ಮತ್ತು ಭಾರತ’ ಕಾರ್ಯಕ್ರಮದಲ್ಲಿ ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅತಿಥಿಯಾಗಿ ಗೋವಿಂದಪ್ಪ ಗೌಡಪ್ಪಗೋಳ ಆಗಮಿಸುವರು’ ಎಂದರು.

‘6ರಂದು ಸಂಜೆ 6 ಗಂಟೆಗೆ ‘ಮಹಿಳಾ ದೌರ್ಜನ್ಯ ಮತ್ತು ಪುರುಷ ದೌರ್ಜನ್ಯ’ ಕಾರ್ಯಕ್ರಮ ನಡೆಯಲಿದ್ದು, ಚನ್ನಮ್ಮನ ಕಿತ್ತೂರಿನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಜಯಲಕ್ಷ್ಮಿ ಪುಟ್ಟಿ, ಮುರುಗೇಶ ಶಿವಪೂಜಿ ಮತ್ತು ರವಿ ಕೋಟಾರಗಸ್ತಿ ಉಪನ್ಯಾಸ ನೀಡುವರು. 7ರಂದು ಸಂಜೆ 6ಕ್ಕೆ ನಡೆಯಲಿರುವ ಕವಿಗೋಷ್ಠಿಯನ್ನು ಬಸವರಾಜ ಜಗಜಂಪಿ ಉದ್ಘಾಟಿಸುವರು. ಎಚ್‌.ಐ.ತಿಮ್ಮಾಪುರ ಅಧ್ಯಕ್ಷತೆ ವಹಿಸುವರು. ನಂತರ ನಡೆಯುವ ಸನ್ಮಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಆಗಮಿಸುವರು. ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಸೇರಿ ಹಲವು ಸಾಧಕರನ್ನು ಸನ್ಮಾನಿಸಲಾಗುವುದು’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT