ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಕಡಿತ; ತೀವ್ರ ಪ್ರತಿಭಟನೆ

Last Updated 17 ಸೆಪ್ಟೆಂಬರ್ 2019, 11:13 IST
ಅಕ್ಷರ ಗಾತ್ರ

ಗೋಕಾಕ: ಇಲ್ಲಿಗೆ ಸಮೀಪದ ಗೋಕಾಕ–ಫಾಲ್ಸ್‌ ದನದ ಓಣಿಗೆ ಬಂಡವಾಳಷಾಹಿಗಳ ಕುಮ್ಮಕ್ಕಿನಿಂದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಬಿಜೆಪಿಯ ಮುಖಂಡ ಅಶೋಕ ಪೂಜಾರಿ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಸೋಮವಾರ ಧರಣಿ ನಡೆಸಿದರು.

ದನದ ಓಣಿಯ ನಿವಾಸಿಗಳು ಗೋಕಾಕ ತಹಶೀಲ್ದಾರ್‌ ಕಚೇರಿಯವರೆಗೆ ಪಾದಯಾತ್ರೆ ಮಾಡಿದರು. ದಾರಿಯುದ್ದಕ್ಕೂ ಬಂಡವಾಳಷಾಹಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಪ್ರತಿಭಟನಾ ನಿರತರನ್ನು ಬೆಂಬಲಿಸಿ ಮಾತನಾಡಿದ ಅಶೋಕ ಪೂಜಾರಿ, ‘ಗೋಕಾಕ ಮಿಲ್ಸ್‌ ಆಡಳಿತ ಮಂಡಳಿ ಮತ್ತು ಕೊಣ್ಣೂರ ಪುರಸಭೆಯ ನಿಷ್ಕ್ರೀಯ ಮನೋಭಾವನೆ, ಗೋಕಾಕ ಮಿಲ್ಸ್‌ ಆಡಳಿತ ಮಂಡಳಿಯ ಬಂಡವಾಳಷಾಹಿ ಹಿತ ಕಾಪಾಡುವ ಮನೋಭಾವನೆಯಿಂದಾಗಿ 500ಕ್ಕೂ ಹೆಚ್ಚು ಕಾರ್ಮಿಕರು ಸುಮಾರು ಒಂದು ತಿಂಗಳಿನಿಂದ ಕತ್ತಲಲ್ಲಿದ್ದಾರೆ’ ಎಂದು ಆರೋಪಿಸಿದರು.

‘ತಕ್ಷಣ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ನಿಂಗಪ್ಪ ನಾಯಿಕ, ದಶರಥ ಪೂಜೇರಿ, ವಿಠ್ಠಲ ಬೂರನ್ನವರ, ಮಂಜು ಮೇರನ್ನವರ, ರಾಜು ಬಸವರಾಜ ನೀಲನ್ನವರ, ಪ್ರೇಮಾ ಚಿಕ್ಕೋಡಿ, ಅನ್ನಪೂರ್ಣಾ ಭೈರತಿ, ರಾಜು ಯರಗಟ್ಟಿ, ಲಕ್ಷ್ಮವ್ವ ಬಾದನವರ, ಯಲ್ಲವ್ವ ಹೆಳವಗೋಳ, ವಿಜಯ ಕರಗುಪ್ಪಿ, ಸಂತೋಷ ಮಾಳಿಗೇರ, ಬಾಳಪ್ಪ ಕರಗುಪ್ಪಿ, ಜ್ಯೋತಿ ಮಾದರ, ರಾಜು ಜಾಧವ, ಸುನೀಲ ಮುರ್ಕಿಭಾಂವಿ, ದಸ್ತಗೀರ ಪೈಲವಾನ, ಶಾಮಾನಂದ ಪೂಜೇರಿ, ವಿರುಪಾಕ್ಷಿ ಯಲಿಗಾರ, ಚನ್ನಬಸು ರುದ್ರಾಪೂರ, ಮಹೇಶ ಮಠಪತಿ, ಆದರ್ಶ ಪೂಜಾರಿ, ಸತೀಶ ಪೂಜಾರಿ, ಹಣಮಂತ ಕಾಳಮ್ಮಗುಡಿ, ಶ್ರೀಶೈಲ ಪೂಜಾರಿ, ನಿಂಗಪ್ಪ ಅಮ್ಮಿನಭಾಂವಿ, ಯಲ್ಲಪ್ಪ ಹುಕ್ಕೇರಿ, ಕುಮಾರ ಬೆಳವಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT