ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಕೆಎಲ್‌ಇ ಆಸ್ಪತ್ರೆ: 3ನೇ ಯಶಸ್ವಿ ಹೃದಯ ಕಸಿ

Last Updated 14 ಏಪ್ರಿಲ್ 2022, 13:59 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ಕೆಎಲ್‌ಇ ಸೊಸೈಟಿಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ (ಆಸ್ಪತ್ರೆ) ವೈದ್ಯರ ತಂಡದವರು, ಹೃದಯ ಕಸಿಯನ್ನು 3ನೇ ಬಾರಿಗೆ ಯಶಸ್ವಿಯಾಗಿ ನೆರವೇರಿಸಿದ್ದಾರೆ. ಗೋವಾದ 25 ವರ್ಷದ ವ್ಯಕ್ತಿಗೆ ಹೊಸ ಜೀವನ ನೀಡಿದ್ದಾರೆ.

‘ಹೃದ್ರೋಗದಿಂದ ಬಳಲುತ್ತಿದ್ದ ಯುವಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ಸರ್ಕಾರದ ‘ಜೀವಸಾರ್ಥಕ’ ಕಾರ್ಯಕ್ರಮದಲ್ಲಿ 2018ರಲ್ಲಿ ಹೃದಯ ಕಸಿಗಾಗಿ ಹೆಸರು ನೋಂದಾಯಿಸಿದ್ದರು. ಆಗಿನಿಂದ ದಾನಿಗಳ ಹೃದಯವು ಅವರಿಗೆ ಹೊಂದುತ್ತಿರಲಿಲ್ಲ. ವೈದ್ಯರು ನಿರಂತರ ಚಿಕಿತ್ಸೆಯಿಂದ ಹೃದಯವನ್ನು ನಿರ್ವಹಿಸುತ್ತಿದ್ದರು. ತಲೆಗೆ ಪೆಟ್ಟು ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬೆಳಗಾವಿಯ ವ್ಯಕ್ತಿಯ ಮಿದುಳು ಕಾರ್ಯ ಸ್ಥಗಿತಗೊಳಿಸಿತ್ತು. ವೈದ್ಯರು ಆ ವ್ಯಕ್ತಿಯ ಕುಟುಂಬದವರೊಂದಿಗೆ ಆಪ್ತಸಮಾಲೋಚನೆ ನಡೆಸಿ ಅಂಗಾಂಗ ದಾನಕ್ಕೆ ಒಪ್ಪಿಸಿದರು. ಯುವಕನಿಗೆ ಹೃದಯ ಕಸಿ ಮಾಡಿದರು’.

‘ಆ ಯುವಕ ಗುಣಮುಖನಾಗಿ ಹೊಸ ಹೃದಯದೊಂದಿಗೆ ಮನೆಗೆ ತೆರಳಿದರು’ ಎಂದು ಮುಖ್ಯ ಶಸ್ತ್ರಚಿಕಿತ್ಸಕ ಡಾ.ರಿಚರ್ಡ್‌ ಸಾಲ್ಢಾನಾ ತಿಳಿಸಿದರು.

ಯುವಕನಿಗೆ ಶುಭ ಕೋರಿ ಬೀಳ್ಕೊಟ್ಟ ಕೆಎಲ್‌ಇ ಸೊಸೈಟಿ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ‘ಜಾಗತಿಕ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಕೈಗೆಟಕುವ ದರದಲ್ಲಿ ನಮ್ಮ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ. ಮೆಟ್ರೊ ನಗರಗಳಲ್ಲಿ ಹೃದಯ ಕಸಿಗೆ ₹20ಲಕ್ಷದಿಂದ ₹ 25 ಲಕ್ಷ ವೆಚ್ಚ ತಗಲುತ್ತದೆ. ನಮ್ಮಲ್ಲಿ ₹ 10 ಲಕ್ಷಕ್ಕೆ ಮಾಡುತ್ತಿದ್ದೇವೆ. ಸೇವೆಯೇ ನಮ್ಮ ಗುರಿಯಾಗಿದೆ’ ಎಂದು ತಿಳಿಸಿದರು.

ಹೃದಯ ಕಸಿಗಾಗಿ ಗೋವಾ ಸರ್ಕಾರವು ಧನಸಹಾಯ ನೀಡಿದೆ.

ತಂಡವನ್ನು ಕೋರೆ ಹಾಗೂ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT