ಚಿಕ್ಕೋಡಿ: ‘ಸಹಕಾರಿ ಕ್ಷೇತ್ರ, ಶಿಕ್ಷಣ ರಂಗ ಹಾಗೂ ಸಮಾಜ ಸೇವೆಯಲ್ಲಿ ಮುಖಂಡ ಅಣ್ಣಾಸಾಹೇಬ ಹಲವೆ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಬೋರಗಾಂವ ಭಾಗದಲ್ಲಿ ಕಾರ್ಯನಿರ್ವಹಿಸಿದ್ದು, ನಿಪ್ಪಾಣಿ ಕ್ಷೇತ್ರದಲ್ಲಿ ಅವರಿಗೆ ರಾಜಕೀಯ ಭವಿಷ್ಯವಿದೆ’ ಎಂದು ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ ಹೇಳಿದರು.
ನಿಪ್ಪಾಣಿ ತಾಲ್ಲೂಕಿನ ಬೋರಗಾಂವದ ವಿದ್ಯಾಸಾಗರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮುಖಂಡ ಅಣ್ಣಾಸಾಹೇಬ ಹವಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಳೆದ ನಾಲ್ಕು ದಶಕಗಳಿಂದ ಬೋರಗಾಂವದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಕಟ್ಟಿ, ಬ್ಯಾಂಕ್ ಸ್ಥಾಪಿಸಿ ಸಹಸ್ರಾರು ಜನರ ಬಾಳಿಗೆ ಬೆಳಕಾಗಿರುವ ವಿದ್ಯಾಸಾಗರ ಶಿಕ್ಷಣ ಸಂಸ್ಥೆ ಹಾಗೂ ಸಿದ್ದೇಶ್ವರ ಕೋ ಆಪ್ ಕ್ರೆಡಿಟ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಣ್ಣಾಸಾಹೇಬ ಹವಲೆ ಅವರು ಇನ್ನೂ ಹೆಚ್ಚಿನ ಸಾಧನೆ ಮಾಡಲಿ’ ಎಂದರು.
ಸಿದ್ದೇಶ್ವರ ಕೋ ಅಪ್ ಕ್ರೆಡಿಟ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಣ್ಣಾಸಾಹೇಬ ಹವಲೆ ಮಾತನಾಡಿ, ‘ಜನರ ಕಲ್ಯಾಣಕ್ಕಾಗಿ ಇನ್ನೂ ಹತ್ತು ಹಲವು ಕೆಲಸ ಕಾರ್ಯಗಳನ್ನು ಮಾಡುವ ಆಲೋಚನೆ ಹೊಂದಿದ್ದು, ತಮ್ಮ ಪ್ರೋತ್ಸಾಹ ಅತ್ಯವಶ್ಯಕವಾಗಿದೆ’ ಎಂದರು.
ಹಂಚಿನಾಳದ ಭಕ್ತಿಯೋಗಾಶ್ರಮದ ಮಹೇಶಾನಂದ ಸ್ವಾಮೀಜಿ, ವರೂರಿನ ಅಮ್ಮಿನಬಾವಿ ಜೈನ ಮಠದ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿದರು.
ಜನ್ಮ ದಿನಾಚರಣೆಯ ನಿಮಿತ್ತ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ, ವೃದ್ಧಾಶ್ರಮದ ನಿವಾಸಿಗಳಿಗೆ ಅವಶ್ಯಕ ವಸ್ತುಗಳ ವಿತರಣೆ, ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ, ರಕ್ತದಾನ ಶಿಬಿರ ಹಾಗೂ ವೃಕ್ಷಾರೋಪಣ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜು ಪವಾರ(ವಡ್ಡರ), ಉದಯ ಪಾಟೀಲ, ರಾಮಗೌಡ ಪಾಟೀಲ, ರೋಹನ ಸಾಳ್ವೆ, ರಾಜೇಶ ಕದಂ, ಶಿವಾಜಿ ಮಾಳಿ, ಸುನಿತಾ ಹವಲೆ, ಸಲೂನಿ ಹವಲೆ, ಐಶ್ವರ್ಯ ಹವಲೆ, ಅನೂತ ಹವಲೆ, ಜಯಕುಮಾರ ಖೋತ, ಪ್ರದೀಪ ಜಾಧವ, ಸುನೀಲ ಪಾಟೀಲ, ಅದಗೊಂಡ ಪಾಟೀಲ, ಜಯಕುಮಾರ ಖೋತ, ಕೆ.ಆರ್. ಪಾಟೀಲ, ದಾಜಿ ಪಾಟೀಲ, ಯಾದಗೌಡ ಪಾಟೀಲ, ಬಾಬು ಪಾಟೀಲ, ಜಯವಂತ ಭಟ್ಟಿ, ರಾಜು ಕಿಚಡೆ , ಸುಮಿತ್ರಾ ಉಗಳೆ ಇದ್ದರು.
ಅಣ್ಣಾಸಾಹೇಬ ಹವಲೆ ಷಷ್ಠಿಪೂರ್ತಿ ಹಾಗೂ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಅಣ್ಣಾಸಾಹೇಬ ಹವಲೆ ಸುನಿತಾ ಹವಲೆ ಸಸಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.