ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ಅಭಿವೃದ್ಧಿಗೆ ನೆರವು

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಂಗವಿಕಲರಿಗೆ ಅನುಕೂಲತೆ ಕಲ್ಪಿಸುವ ಕೃತಕ ಬುದ್ಧಿಮತ್ತೆಯ ಬಹುಬಗೆಯ ಸಾಧನಗಳನ್ನು ಅಭಿವೃದ್ಧಿಪಡಿಸಲು ಮೈಕ್ರೊಸಾಫ್ಟ್‌ ಹಣಕಾಸು ನೆರವು ನೀಡಲಿದೆ.

₹ 167 ಕೋಟಿ ಹೂಡಿಕೆಯ ಈ ಪಂಚವಾರ್ಷಿಕ ಕೊಡುಗೆಯಲ್ಲಿ ತಂತ್ರಜ್ಞಾನ ಮತ್ತು ಪರಿಣತಿ ಕ್ಷೇತ್ರಕ್ಕೆ ನೆರವು ನೀಡಲಾಗುವುದು. ತಂತ್ರಜ್ಞಾನವನ್ನು ಮತ್ತಷ್ಟು ಬಳಕೆದಾರ ಸ್ನೇಹಿಯಾಗಿಸಲು ತಂತ್ರಜ್ಞಾನ ಅಭಿವೃದ್ಧಿಪಡಿಸುವವರ  ಸಾಮರ್ಥ್ಯ ಹೆಚ್ಚಿಸುವುದು ಮೈಕ್ರೊಸಾಫ್ಟ್‌ನ ಉದ್ದೇಶವಾಗಿದೆ.

ದೃಷ್ಟಿ, ಶ್ರವಣಕ್ಕೆ ಸಂಬಂಧಿಸಿದ ಸಾಧನಗಳ ತಯಾರಿಕೆಯಲ್ಲಿ ಈ ಹೂಡಿಕೆಯು ಗ್ರಾಹಕರು, ವಹಿವಾಟುದಾರರು ಮತ್ತು ಉದ್ಯಮಕ್ಕೆ ನೆರವಾಗಲಿದೆ. ಉಪಯುಕ್ತ ಸಾಧನಗಳ ತಯಾರಿಕೆಯಲ್ಲಿ ಮೈಕ್ರೊಸಾಫ್ಟ್‌ ಮತ್ತು ಕ್ವಾಲ್‌ಕಾಂ ಟೆಕ್ನಾಲಜೀಸ್‌ ಸಂಸ್ಥೆಗಳು ಜತೆಯಾಗಿ ಕೆಲಸ ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT