ಭಾನುವಾರ, ಅಕ್ಟೋಬರ್ 17, 2021
22 °C

ಚಿಕ್ಕೋಡಿ: ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ: ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರುವಂತೆ ಒತ್ತಾಯಿಸಿ ಇಲ್ಲಿನ ಸರ್ಕಾರಿ ನೌಕರರು, ವಿವಿಧ ಸಂಘಟನೆಗಳ ಸದಸ್ಯರು ತಹಶೀಲ್ದಾರ್‌ ಮೂಲಕ ಶನಿವಾರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

2006ರಿಂದ ನೂತನ ಪಿಂಚಣಿ ಯೋಜನೆ ಜಾರಿಗೆ ಬಂದಿದ್ದು, ಇದು ಸರ್ಕಾರಿ ನೌಕರರ ಹಾಗೂ ಕುಟುಂಬಸ್ಥರ ಜೀವನ ಅತಂತ್ರಗೊಳಿಸಿದೆ. ಸರ್ಕಾರಿ ನೌಕರರ ಸುಮಾರು 75 ಲಕ್ಷ ಕುಟಂಬ ಸದಸ್ಯರು ಹಾಗೂ 6 ಲಕ್ಷಕ್ಕೂ ಹೆಚ್ಚು ಅವಲಂಬಿತರ ಮೇಲೆ ನೇರ ಪರಿಣಾಮ ಬೀರಿದೆ. ಅದಕ್ಕಾಗಿ ಹೊಸ ಪಿಂಚಣಿ ಯೋಜನೆಯನ್ನು ಹಿಂಪಡೆದು ಹಳೆಯ ಪಿಂಚಣಿ ಯೋಜನೆ ಶೀಘ್ರ ಜಾರಿಗೊಳಿಸುವಂತೆ ಒತ್ತಾಯಿಸಿದರು.

ಸರ್ಕಾರಿ ನೌಕರರ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ವೈ.ಎಸ್.ಬುಡ್ಡಗೋಳ, ಎಸ್.ಎನ್.ಬೆಳಗಾವಿ, ಸಿದ್ದು ಧೂಪದಾಳ, ಜಿ.ಎಂ.ಕಾಂಬಳೆ, ಸಿ.ಬಿ.ಅರಭಾವಿ, ಆರ್.ಕೆ.ಕಾಂಬಳೆ, ಎಸ್.ಜಿ.ಮೋಮಿನ, ಅಜಯ ಬೀರನ್ನವರ, ಉಮೇಶ ತೋಟದ, ಮಹೇಶ ವಾಣಿ, ಶಿವಾನಂದ ಸನದಿ, ಬಸವರಾಜ ಕುನ್ನೂರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.