ಪರಮಾನಂದವಾಡಿ: ಕುಡಚಿ-ಬಾಗಲಕೋಟೆ ಮಾರ್ಗದಲ್ಲಿ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಕುಡಚಿ ಕಡೆಯಿಂದಲೂ ಆರಂಭಿಸಬೇಕು ಎಂದು ಒತ್ತಾಯಿಸಿ ಸಮೀಪದ ಕುಡಚಿಯ ರೈಲ್ವೆ ನಿಲ್ದಾಣ ಬಳಿ, ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ ನೇತೃತ್ವದಲ್ಲಿ ಸದಸ್ಯರು ಗುರುವಾರದಿಂದ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಮೂರನೇ ದಿನವಾದ ಶನಿವಾರವೂ ಹೋರಾಟ ಮುಂದುವರಿಯಿತು.

ಕುತುಬುದ್ದೀನ್ ಖಾಜಿ ಮಾತನಾಡಿ, ‘ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಬಾಗಲಕೋಟೆ ಜಿಲ್ಲೆಯಲ್ಲಷ್ಟೇ ಕಾಮಗಾರಿ ನಡೆಯುತ್ತಿದೆ. ಇತ್ತ ಕುಡಚಿ ಕಡೆಯಿಂದಲೂ ಕಾಮಗಾರಿ ಆರಂಭಿಸಬೇಕು’ ಎಂದು ಆಗ್ರಹಿಸಿದರು.

ಧರಣಿ ಸ್ಥಳಕ್ಕೆ ಬಂದು ಹೋರಾಟಕ್ಕೆ ಬೆಂಬಲ ಸೂಚಿಸಿದ ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ‘ಈ ಕಾಮಗಾರಿ ಬೇಗ ಪೂರ್ಣಗೊಂಡರೆ, ಉಭಯ ಜಿಲ್ಲೆಗಳ ಜನರಿಗೆ ಅನುಕೂಲವಾಗುತ್ತದೆ’ ಎಂದರು.

ಮುಖಂಡರಾದ ಸುಭಾಸ ಶಿರಬೂರ, ಮುಸ್ತಾಕ್ ಬಾಗಶಿರಾಜ, ಶ್ರೀಶೈಲ ದರೂರೆ, ಅಮಿನ್ ವಾಟೆ, ಸಂಜೀವ ಬ್ಯಾಕೂಡೆ, ಮೋಹ್ಸಿನ್ ರೋಹಿಲೆ, ಕಿರಣ ಬೇಡಿ, ಮಹೇಶ ಜಾಧವ, ಅನ್ವರ್ ಚಮನ್ಶೇಖ್, ಸಾಕೀಬ್ ಪಾಳೇಗಾರ, ಮುಶ್ಫಿಕ್ ಜಿನಾಬಡೆ, ಅತಿಫ್ ಪಟಾಯಿತ, ಐಜಾಜ್ ಬಿಚ್ಚು, ರಾಜು ನಿಡಗುಂದಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.