ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಮೇಲೆ ಹಲ್ಲೆ: ಪ್ರತಿಭಟನೆ

Last Updated 30 ಮಾರ್ಚ್ 2023, 5:39 IST
ಅಕ್ಷರ ಗಾತ್ರ

ಅಥಣಿ: ವಾಹನ ನಿಲುಗಡೆ ವಿಚಾರವಾಗಿ ಪೊಲೀಸರು ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಖು ಎಂದು ಆಗ್ರಹಿಸಿ ಅಥಣಿ ವಕೀಲರ ಸಂಘದಿಂದ ಶಿವಯೋಗಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಮೇತ್ರಿ ಮಾತನಾಡಿ, ‘ಮೂಲತಃ ರಾಮದುರ್ಗದ ವಕೀರೊಬ್ಬರು ಪ್ರಸ್ತುತ ಬೆಳಗಾವಿಯಲ್ಲಿ ವೃತ್ತಿ ನಡೆಸುತ್ತಿದ್ದು, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಠಾಣೆ ಹಿಂಬದಿ ವಾಹನ ನಿಲ್ಲಿಸಿದ್ದರು. ಈ ವೇಳೆ ಮಹಿಳಾ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿ ವಾಹನ ತೆಗೆಯುವಂತೆ ಹೇಳಿದ್ದಾರೆ. ವಾದ-ವಿವಾದ ನಡೆದು ಪರಿಸ್ಥಿತಿ ಹಲ್ಲೆ ನಡೆಸುವ ಹಂತಕ್ಕೆ ಹೋಗಿದೆ. ಪೊಲೀಸರು ಯುವ ವಕೀಲನನ್ನು ಥಳಿಸಿದ್ದಾರೆ’ ಎಂದು ಆರೋಪಿಸಿದರು.

ಡಿ.ಬಿ.ಠಕ್ಕಣ್ಣವರ, ವಿ.ಎಸ್. ಪಾಟೀಲ, ಕಿರಣ ಸಬಕಾಳೆ, ಎಸ್.ಎಸ್. ಪಾಟೀಲ, ಅರುಣ ಮೇಲ್ಗಡೆ, ಎಸ್.ಕೆ. ಮಟ್ಟೆಪ್ಪನವರ, ಬಿ.ಪಿ. ಕಾಂಬಳೆ, ಮಾದೇವ ಯಕ್ಕಂಚಿ, ಪಾಂಡು ಡೋಕೆ ಸೇರಿದಂತೆ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT