ಬೆಳಗಾವಿ: ಪತ್ರಕರ್ತರಾಗಿದ್ದ ರಾಘವೇಂದ್ರ ಜೋಶಿ ಮತ್ತು ಅಶೋಕ ಯಾಳಗಿ ಹಾಗೂ ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ ಅವರಿಗೆ ಇಲ್ಲಿನ ಪತ್ರಕರ್ತರ ಸಂಘದಿಂದ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಭಾಭವನದಲ್ಲಿ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಮಾತನಾಡಿ, ‘ಪತ್ರಕರ್ತರು ಸಮಾಜದ ಆಗು ಹೋಗುಗಳ ಬಗ್ಗೆ ನಿರ್ಭೀತಿಯಿಂದ ಬೆಳಕು ಚೆಲ್ಲಬೇಕು. ಆಗ ಮಾತ್ರ ಸಮಾಜದಲ್ಲಿ ಉತ್ತಮ ಹೆಸರು ಪಡೆದುಕೊಳ್ಳಲು ಸಾಧ್ಯ. ರಾಜ್ಯದಲ್ಲೇ ಬೆಳಗಾವಿಯಲ್ಲಿ ಮಾಧ್ಯಮ ಕ್ಷೇತ್ರ ಹೊಸ ದಿಕ್ಸೂಚಿಯನ್ನು ಬರೆದಿದೆ. ಇಲ್ಲಿನ ಪತ್ರಿಕೆಗಳು ಸದಾ ಕಾಲವೂ ನಾಡು–ನುಡಿಗಾಗಿ ದನಿ ಎತ್ತುತ್ತಿವೆ. ನಿರ್ಭೀತವಾಗಿ ಕಾರ್ಯನಿರ್ವಹಿಸಿದ್ದ ರಾಘವೇಂದ್ರ ಜೋಶಿ ಹಾಗೂ ಅಶೋಕ ಯಾಳಗಿ ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶ್ರೀಶೈಲ ಮಠದ, ಕಾರ್ಯಾಧ್ಯಕ್ಷ ಕುಂತಿನಾಥ ಕಲಮನಿ ಮಾತನಾಡಿದರು.

ಉಪಾಧ್ಯಕ್ಷ ಮಹೇಶ್ ವಿಜಾಪೂರ, ಕಾರ್ಯದರ್ಶಿ ಸುರೇಶ ನೇರ್ಲಿ, ಜಂಟಿ ಕಾರ್ಯದರ್ಶಿಗಳಾದ ಜಗದೀಶ ವಿರಕ್ತಮಠ, ಸುನೀಲ ಪಾಟೀಲ, ಖಜಾಂಚಿ ಮಂಜುನಾಥ ಕೋಳಿಗುಡ್ಡ, ಸದಸ್ಯರಾದ ಕೀರ್ತಿ ಕಾಸರಗೋಡು, ರಾಜಶೇಖರಯ್ಯ ಹಿರೇಮಠ, ಅಶೋಕ ಮುದ್ದಣ್ಣವರ, ಹೀರಾಮಣಿ ಕಂಗ್ರಾಳಕರ, ಲಗಮಣ್ಣ ಸಣ್ಣ ಲಚ್ಚಪ್ಪಗೋಳ, ಅರುಣ ಯಳ್ಳೂರಕರ, ವಿಶ್ವನಾಥ ದೇಸಾಯಿ, ಏಕನಾಥ ಅಗಸಿಮನಿ, ಪುಂಡಲೀಕ ಬಡಿಗೇರ, ಅಶೋಕ ಮಗದುಮ್ಮ, ಮಹಾದೇವ ಪವಾರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.