ಕಾಗವಾಡ: 'ಶಾಸಕ ರಾಜು ಕಾಗೆ ಅವರೆ ಮುಂದಿನ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಅವರೆ ಶಾಸಕರಾಗಿ ಆಯ್ಕೆ ಆಗುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಅವರ ಬಗ್ಗೆ ಸವದಿ ಬೆಂಬಲಿಗರು ಅಪ ಪ್ರಚಾರ ಮಾಡಿ ಮನಸ್ಸು ನೋಯಿಸುವುದು ಸರಿಯಲ್ಲ’ ಎಂದು ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಬಸನಗೌಡ ಪಾಟೀಲ ಬೋಮ್ಮನಾಳ ಹೇಳಿದರು.

ಮಂಗಸೂಳಿ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸವದಿ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ರಾಜು ಕಾಗೆ ಅವರ ಆರೋಗ್ಯ ಸರಿ ಇಲ್ಲಾ ಅವರು 2028ಕ್ಕೆ ಮಾಜಿ ಶಾಸಕ ಆಗುತ್ತಾರೆ. ಚಿದಾನಂದ ಸವದಿ ಕಾಗವಾಡ ಶಾಸಕರಾಗುತ್ತಾರೆ ಎಂಬ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡುತ್ತಿದ್ದಾರೆ. ಈ ಅಪಪ್ರಚಾರ ನಿಲ್ಲಿಸಬೇಕು’ ಎಂದರು.

‘ಕಳೆದ ಮೂವತ್ತು ವರ್ಷಗಳ ಕಾಲ ಕ್ಷೇತ್ರದಲ್ಲಿ ಹಲವು ಜನಪರ ಕೆಲಸವನ್ನು ಮಾಡಿ ಯಾವುದೇ ಜಾತಿಗೆ ಸೀಮಿತವಾಗದೆ ಜನಪ್ರಿಯತೆ ಗಳಿಸಿದ್ದಾರೆ. ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಜೋಡೆತ್ತುಗಳಂತೆ ಕೆಲಸ ಮಾಡುತ್ತಾ ಬಂದಿದ್ದಾರೆ. ಅದರೆ ಇತ್ತಿಚಿನ ದಿನಗಳಲ್ಲಿ ಚಿದಾನಂದ ಸವದಿ ಬೆಂಬಲಿಗರು ಈ ರೀತಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಬೆಂಬಲಿಗರು ನಡೆಸುವ ಕಾರ್ಯಕ್ರಮಗಳ ಬ್ಯಾನರ್ಗಳಲ್ಲಿ ನಿಯಮಗಳ ಪ್ರಕಾರ ಸ್ಥಳೀಯ ಶಾಸಕ ರಾಜು ಕಾಗೆ ಅವರ ಭಾವಚಿತ್ರ ಹಾಕದೆ ಬೇರೆ ಶಾಸಕರ ಭಾವಚಿತ್ರ ಹಾಕಲಾಗುತ್ತಿದ್ದು ಇದನ್ನು ತಕ್ಷಣ ನಿಲ್ಲಿಸಬೇಕು. ಇದು ಹೀಗೆ ಮುಂದುವರಿದರೆ ಅಥಣಿ ಹಾಗೂ ಕಾಗವಾಡದ ಪಂಚಮಸಾಲಿ ಲಿಂಗಾಯತ ಒಳ ಪಂಗಡ ಸಮಾಜದ ಒಗ್ಗಟ್ಟು ಪ್ರದರ್ಶನ ಮಾಡಬೇಕಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.