ರಾಣಿ ಚನ್ನಮ್ಮ ವಿಜಯ ಜ್ಯೋತಿಯಾತ್ರೆ 16ರಿಂದ ಆರಂಭ

7

ರಾಣಿ ಚನ್ನಮ್ಮ ವಿಜಯ ಜ್ಯೋತಿಯಾತ್ರೆ 16ರಿಂದ ಆರಂಭ

Published:
Updated:

ಬೆಳಗಾವಿ: ಐತಿಹಾಸಿಕ ರಾಣಿ ಚನ್ನಮ್ಮ ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ ಯಾತ್ರೆಯು ಇದೇ 16 ರಿಂದ 23ರವರೆಗೆ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಸಂಚರಿಸಲಿದೆ.

ಬೈಲಹೊಂಗಲದಲ್ಲಿರುವ ಚನ್ನಮ್ಮಳ ಸಮಾಧಿ ಸ್ಥಳದಿಂದ 16ರಂದು ಬೆಳಿಗ್ಗೆ 10 ಗಂಟೆಗೆ ವಿಜಯ ಜ್ಯೋತಿ ಯಾತ್ರೆ ವಿಶೇಷ ವಾಹನ
ಹೊರಡಲಿದೆ. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಮಟೂರ ಮಾರ್ಗವಾಗಿ ಖಾನಾಪುರಕ್ಕೆ ಸಂಜೆ 5ಕ್ಕೆ ತಲುಪಲಿದೆ.

17ರಂದು ಬೆಳಿಗ್ಗೆ 9ಕ್ಕೆ ಖಾನಾಪುರದಿಂದ ಹೊರಡುವ ಯಾತ್ರೆಯು 10.30ಕ್ಕೆ ಬೆಳಗಾವಿಗೆ ಆಗಮಿಸಲಿದೆ. ಸಾಂಸ್ಕೃತಿಕ
ಕಾರ್ಯಕ್ರಮಗಳ ನಂತರ ಮಧ್ಯಾಹ್ನ 3ಕ್ಕೆ ಕಾಕತಿಗೆ ತೆರಳಲಿದೆ. 18ರಂದು ಬೆಳಿಗ್ಗೆ 8.30ಕ್ಕೆ ಹುಕ್ಕೇರಿಗೆ ತಲುಪಲಿದೆ. ಮಧ್ಯಾಹ್ನ 3.30ಕ್ಕೆ ಚಿಕ್ಕೋಡಿ, ಸಂಜೆ 5.30ಕ್ಕೆ ಕಾಗವಾಡಕ್ಕೆ ಆಗಮಿಸಿ, ವಾಸ್ತವ್ಯ ಮಾಡಲಿದೆ.

19ರಂದು ಬೆಳಿಗ್ಗೆ 10 ಗಂಟೆಗೆ ಕಾಗವಾಡದಿಂದ ಹೊರಟು, ಮಧ್ಯಾಹ್ನ 12 ಗಂಟೆಗೆ ಅಥಣಿಗೆ ತಲುಪಲಿದೆ. 20ರ ಬೆಳಿಗ್ಗೆ
9 ಕ್ಕೆ ಅಥಣಿಯಿಂದ ತೆರಳುವ ಜ್ಯೋತಿ ಯಾತ್ರೆ ರಾಯಭಾಗಕ್ಕೆ ಆಗಮಿಸಲಿದೆ. ಸಂಜೆ 4ಕ್ಕೆ ಗೋಕಾಕ ನಗರಕ್ಕೆ ತಲುಪಲಿದೆ.
21ರ ಬೆಳಿಗ್ಗೆ 9ಕ್ಕೆ ರಾಮದುರ್ಗಕ್ಕೆ ಜ್ಯೋತಿ ಆಗಮಿಸಲಿದೆ. 22ರಂದು ಸವದತ್ತಿ ಮಾರ್ಗವಾಗಿ ಬೈಲಹೊಂಗಲಕ್ಕೆ ತಲುಪಲಿದೆ. ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಸಂಜೆ 6ಕ್ಕೆ ಕಿತ್ತೂರು ಸೈನಿಕ ಶಾಲೆಗೆ ಆಗಮಿಸಿ, ವಾಸ್ತವ್ಯ ಹೂಡಲಿದೆ.

23ರ ಬೆಳಿಗ್ಗೆ 7.30ಕ್ಕೆ ಸೈನಿಕ ಶಾಲೆಯಿಂದ ಕಿತ್ತೂರಿನ ರಾಣಿ ಚನ್ನಮ್ಮ ವೃತ್ತಕ್ಕೆ ಬಂದು ತಲುಪಲಿದೆ. ಸ್ವಾತಂತ್ರ್ಯ-ಸ್ವಾಭಿಮಾನದ ಸಂಕೇತವಾದ ಈ ವಿಜಯ ಜ್ಯೋತಿ ಯಾತ್ರೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !