ಬುಧವಾರ, ಆಗಸ್ಟ್ 10, 2022
20 °C

ಬೆಳಗಾವಿ: ಚರ್ಮಕಾರ ಸಮಾಜದವರಿಗೆ ದಿನಸಿ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಇಲ್ಲಿನ ಚರ್ಮಕಾರ ಸಮಾಜದ 100 ಕುಟುಂಬಗಳಿಗೆ ಪ್ರೋತ್ಸಾಹ ಪ್ರತಿಷ್ಠಾನದಿಂದ ದಿನಸಿ ಕಿಟ್‌ಗಳನ್ನು ಯೂನಿಯನ್ ಜಿಮ್ಖಾನಾದಲ್ಲಿ ವಿತರಿಸಲಾಯಿತು.

ಸಿಪಿಐ ಸಂತೋಷಕುಮಾರ ಚಂದಾವರಿ ಮಾತನಾಡಿ, ‘ಕೊರೊನಾದಿಂದ ಬಹಳಷ್ಟು ಜನ ಸಂಕಷ್ಟಕ್ಕೀಡಾಗಿದ್ದಾರೆ. ಕೆಲಸವಿಲ್ಲದೆ ಚರ್ಮಕಾರ ಸಮಾಜದವರಿಗೆ ಬಹಳಷ್ಟು ತೊಂದರೆಯಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು. ಒಗ್ಗಟ್ಟಾಗಿ ಅಭಿವೃದ್ಧಿ ಹೊಂದಬೇಕು’ ಎಂದು ಸಲಹೆ ನೀಡಿದರು.

ಲೋಕೋಪಯೋಗಿ ಇಲಾಖೆ ಎಸ್‌ಇ ಭೀಮರಾವ ಪವಾರ, ‘ಅಧಿಕಾರಿಗಳಾದ ನಾವು ಸಮಾಜದ ಏಳಿಗೆಗೆ ಕೈಲಾದ ಸಹಾಯ ಮಾಡುತ್ತಿದ್ದೇವೆ. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ ಎಂದರು.

ಮಾರ್ಕೆಟ್‌ ಉಪ ವಿಭಾಗದ ಎಸಿಪಿ ಸದಾಶಿವ ಕಟ್ಟೀಮನಿ, ‘ಮಕ್ಕಳ ಶಿಕ್ಷಣದ ಸಲುವಾಗಿ ವೈಯಕ್ತಿಕವಾಗಿ ಸಹಾಯ ಮಾಡಲು ಸಿದ್ಧನಿದ್ದೇನೆ. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಶಿಕ್ಷಣವೆಂದರೆ ಹುಲಿಯ ಹಾಲಿದ್ದಂತೆ. ಅದರಿಂದ ಶಕ್ತಿ ಬರುತ್ತದೆ’ ಎಂದು ತಿಳಿಸಿದರು.

ಆದಾಯ ತೆರಿಗೆ ಇಲಾಖೆಯ ಜಿಎಸ್‌ಟಿ ವಿಭಾಗದ ಉಪ ಆಯುಕ್ತ ಚಂದ್ರಕಾಂತ ಲೋಕರೆ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ವಾಸುದೇವ ದೊಡ್ಡಮನಿ, ಆರ್‌ಸಿಯು ಪ್ರಾಧ್ಯಾಪಕ ಡಾ.ಚಂದ್ರಕಾಂತ ವಾಘಮಾರೆ, ಮುಖಂಡ ಮಲ್ಲೇಶ ಚೌಗುಲೆ ಮಾತನಾಡಿದರು.

ಚರ್ಮೋದ್ಯಮದಲ್ಲಿ ನಿರತರಾದವರಿಗೆ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ವೃತ್ತಿ ಪ್ರಮಾಣಪತ್ರ ವಿತರಿಸಲಾಯಿತು.

ಬಿಎಸ್ಎನ್ಎಲ್ ಡಿಜಿಎಂ ಮಲ್ಲಿಕಾರ್ಜುನ ತಾಳಿಕೋಟಿ, ಎಲ್‌ಐಸಿ ಸಹಾಯಕ ವ್ಯವಸ್ಥಾಪಕ ಜಿ.ಬಿ. ವಾಘಮಾರೆ, ಆಡಿಟ್ ಆಫೀಸರ್ ಸಾಗರ ಕಿತ್ತೂರ, ಡಾ.ಸುರೇಶ ದೊಡವಾಡ ಶಂಕರ ಕಾಂಬಳೆ, ‘ಪ್ರಜಾ ನೆರಳು’ ಪತ್ರಿಕೆ ಸಂಪಾದಕ ಸಾಗರ ಕೋಳೇಕರ, ಛಾಯಾಗ್ರಾಹಕ ರವಿ ಹೊಂಗಲ, ಹೀರಾಲಾಲ ಚವಾಣ, ಶಿವಾಜಿ ಪವಾರ, ಸಂಜಯ ಚೌಗುಲೆ ಇದ್ದರು.

ಸಂತೋಷ ಹೊಂಗಲ ಪ್ರಾಸ್ತಾವಿಕ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು