ಪಡಿತರ ಕೊಡಲು ತಕರಾರು: ಆರೋಪ

7
ಹುಕ್ಕೇರಿ ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಸದಸ್ಯರ ಚರ್ಚೆ

ಪಡಿತರ ಕೊಡಲು ತಕರಾರು: ಆರೋಪ

Published:
Updated:

ಹುಕ್ಕೇರಿ: ಪಡಿತರದಾರರು ಕಿರಾಣಿ ವಸ್ತುಗಳನ್ನು ತೆಗೆದುಕೊಳ್ಳದೇ ಇದ್ದಲ್ಲಿ ವಿತರಕರು ಅಹಾರ ಧಾನ್ಯ ಕೊಡಲು ‘ಸರ್ವರ್ ನೆಪ’ ಹೇಳಿ ಕಿರಿ ಕಿರಿ ಮಾಡುತ್ತಿದ್ದಾರೆ ಎಂದು ಸದಸ್ಯರು ಬುಧವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.

ಸರ್ವರ್ ನಿಧಾನ ಎಂಬ ಕುಂಟು ನೆಪ ಹೇಳಿ ಫಲಾನುಭವಿಗಳನ್ನು ವಂಚಿಸುತ್ತಿದ್ದಾರೆ. ಕಿರಾಣಿ ವಸ್ತುಗಳನ್ನು ತೆಗೆದುಕೊಂಡವರಿಗೆ ಯಾವುದೇ ನೆಪ ಹೇಳದೆ ಪಡಿತರ ನೀಡುತ್ತಿದ್ದಾರೆ ಎಂದು ಹೇಳಿದರು.

‘ಸಕ್ಕರೆ, ಸೋಪು, ಗಾಣದ ಎಣ್ಣೆ, ಚಹಾಪುಡಿ ಇನ್ನಿತರ ವಸ್ತುಗಳನ್ನು ಬೇಡವೆಂದರೂ ಬಲವಂತವಾಗಿ ಕೊಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮಾತೃಪೂರ್ಣ ಯೋಜನೆಯಡಿ ಬಾಣಂತಿಯರಿಗೆ ಅಹಾರದ ಸೌಲಭ್ಯ ಸಿಗುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರು ಸಭೆಯ ನೆಪ ಹೇಳಿ ಸರಿಯಾಗಿ ಮಕ್ಕಳ ಉಪಚಾರ ಮಾಡುತ್ತಿಲ್ಲ’ ಎಂದರು.

ಸರ್ಕಾರಿ ಶಾಲೆಗಳಲ್ಲಿ ಬಿರುಕು ಬಿಟ್ಟಿರುವ ಕೊಠಡಿಗಳನ್ನು ಗುರುತಿಸಬೇಕು. ಇಂಥ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಮಾಡದಂತೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದರು.

ತಾ.ಪಂ. ಅಧ್ಯಕ್ಷ ದಸ್ತಗೀರ ಬಸ್ಸಾಪುರೆ, ಉಪಾಧ್ಯಕ್ಷ ಮಹಾದೇವಿ ಪಾಟೀಲ ಇದ್ದರು. ಸದಸ್ಯರಾದ ಬಸವರಾಜ ನಾಯಕ, ಸಿದ್ಧಪ್ಪ ಪೂಜಾರಿ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಕಾರ್ಯನಿರ್ವಹಣಾಧಿಕಾರಿ ಎಂ.ಎಸ್‌. ಬಿರಾದಾರ ಪಾಟೀಲ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !