ಚಂದ್ರಮೌಳಿ ಕಾಲೊನಿಯಲ್ಲಿ ಬಸ್‌ ನಿಲುಗಡೆಗೆ ಆಗ್ರಹ

ಸೋಮವಾರ, ಮೇ 27, 2019
23 °C

ಚಂದ್ರಮೌಳಿ ಕಾಲೊನಿಯಲ್ಲಿ ಬಸ್‌ ನಿಲುಗಡೆಗೆ ಆಗ್ರಹ

Published:
Updated:
Prajavani

ಬೆಳಗಾವಿ: ಇಲ್ಲಿನ ಹೊರವಲಯದ ಕಣಬರಗಿ ರಸ್ತೆಯಲ್ಲಿರುವ ಚಂದ್ರಮೌಳಿ ಕಾಲೊನಿಯಲ್ಲಿ ‘ವಿನಂತಿ ಮೇರೆಗೆ ಬಸ್‌ ನಿಲುಗಡೆ ಮಾಡಬೇಕು’ ಎಂದು ಕೋರಿ ಅಲ್ಲಿನ ನಿವಾಸಿಗಳ ಸಂಘದವರು ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಕ ಮಹಾದೇವಪ್ಪ ಮುಂಜಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

‘ಈ ಬಡಾವಣೆಯು ರುಕ್ಮಿಣಿ ನಗರ ಹಾಗೂ ಭಾರತ ಕಾಲೊನಿಯ ಮಧ್ಯದಲ್ಲಿ ಬರುತ್ತದೆ. 60ಕ್ಕೂ ಹೆಚ್ಚಿನ ಕುಟುಂಬಗಳು ವಾಸಿಸುತ್ತಿವೆ. ಸಾರಿಗೆ ಬಸ್‌ಗಳನ್ನು ಶಿವತೀರ್ಥ ಅಪಾರ್ಟ್‌ಮೆಂಟ್ ಬಳಿ ನಿಲ್ಲಿಸಲಾಗುತ್ತಿದೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಹೀಗಾಗಿ, ಬಡಾವಣೆಯಲ್ಲಿ ನಗರ ಸಾರಿಗೆ ಬಸ್‌ಗಳು ನಿಲುಗಡೆ ಮಾಡುವಂತೆ ನಿರ್ದೇಶನ ಕೊಡಬೇಕು’ ಎಂದು ಕೋರಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !