ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ: ಅಕ್ಕಿ ಅಕ್ರಮ ಸಾಗಾಟ: ವಾಹನ ಜಪ್ತಿ

Last Updated 6 ಅಕ್ಟೋಬರ್ 2021, 3:56 IST
ಅಕ್ಷರ ಗಾತ್ರ

ಮೂಡಲಗಿ: ಅನ್ನಭಾಗ್ಯದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎರಡು ವಾಹನಗಳನ್ನು ಮೂಡಲಗಿ ಪಿಎಸ್‌ಐ ಎಚ್.ವೈ. ಬಾಲದಂಡಿ ನೇತೃತ್ವದ ತಂಡವು ತಾಲ್ಲೂಕಿನ ಮುನ್ಯಾಳ ಮತ್ತು ಖಾನಟ್ಟಿ ಗ್ರಾಮದಲ್ಲಿ ಜಪ್ತಿ ಮಾಡಿದೆ.

ಸೋಮವಾರ ಮುನ್ಯಾಳ ಗ್ರಾಮದಲ್ಲಿ ಮನೆ, ಮನೆಗೆ ತೆರಳಿ ಅನ್ನಭಾಗದ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ತ್ರಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದಾಗ, ವಾಹನವನ್ನು ಜಪ್ತಿ ಮಾಡಿ 7.20 ಕ್ವಿಂಟಲ್‌ ಅಕ್ಕಿ ಮತ್ತು ವಾಹವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ರಬಕವಿ ಪಟ್ಟಣದ ಬಸವರಾಜ ದುಂಡಪ್ಪ ಜಮಖಂಡಿ, ಪ್ರಭು ಮಾರುತಿ ಅಲಕನೂರ, ಕರೆಪ್ಪ ಪರಸಪ್ಪ ಅಲಕನೂರ, ಶಿರಸು ಸಿದರಾಮ ಖಾನಟ್ಟಿ ಅವರನ್ನು ಬಂಧಿಸಿದ್ದಾರೆ.

ಮಂಗಳವಾರ ಖಾನಟ್ಟಿ ಗ್ರಾಮದ ಮದಾಭಾಂವಿ ಗ್ರಾಮದತ್ತ ಸಾಗುತ್ತಿದ್ದ ಮಿನಿ ಟಾಟಾ ಎಸಿ ವಾಹನವನ್ನು ಸಪಾಸಣೆ ಮಾಡಿ ಸುಮಾರು 5 ಕ್ವಿಂಟಲ್‌ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ವಾಹನ ಚಾಲಕ ಪರಾರಿಯಾಗಿದ್ದಾನೆ. ಎರಡು ಪ್ರತ್ಯೇಕ ಪ್ರಕರಣಗಳನ್ನು ಮೂಡಲಗಿ ಠಾಣೆಯಲ್ಲಿ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT