ಮುಗಳಖೋಡ: ‘ಶ್ರದ್ಧೆ ಮತ್ತು ನಂಬಿಕೆಯಿಂದ ಮಠಕ್ಕೆ ರೊಟ್ಟಿ ತಟ್ಟಿ ತಂದು ಭಕ್ತರಿಗೆ ಉಣಬಡಿಸಿದರೆ, ನಿಮ್ಮ ಬಾಳಿನಲ್ಲಿ ಎಂದಿಗೂ ಅನ್ನಕ್ಕೆ ಕೊರತೆಯಾಗದು’ ಎಂದು ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಯಲ್ಲಾಲಿಂಗೇಶ್ವರ 40ನೇ ಪುಣ್ಯಸ್ಮರಣೋತ್ಸವ ಪ್ರಯುಕ್ತ ಸೋಮವಾರ ನಡೆದ ಅಜ್ಜನ ರೊಟ್ಟಿ ಬುತ್ತಿ ಜಾತ್ರೆಯಲ್ಲಿ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸುತ್ತಲಿನ ಗ್ರಾಮಗಳ ಸಾವಿರಾರು ತಾಯಂದಿರರು, ವಿಠಲ ಮಂದಿರದಿಂದ ಮಠದವರೆಗೆ ಮೆರವಣಿಗೆ ಮೂಲಕ ಆಗಮಿಸಿ, ರೊಟ್ಟಿ ಬುತ್ತಿಯನ್ನು ಮಠಕ್ಕೆ ಅರ್ಪಿಸಿದರು. ಹಲವು ಭಕ್ತರು ನಾಣ್ಯಗಳಿಂದ ಶ್ರೀಗಳ ತುಲಾಭಾರ ಮಾಡಿದರು.

ಶಿರಶ್ಯಾಡಳದ ಮುರುಘರಾಜೇಂದ್ರ ಸ್ವಾಮೀಜಿ, ಮುದಗಲ್ಲದ ಮಹಾಂತ ಶಿವಯೋಗಿಗಳು, ಪಡಸಾವಳಗಿಯ ಶಂಭುಲಿಂಗ ಶಿವಾಚಾರ್ಯರು ಇತರರಿದ್ದರು. ಸೋಮು ಹೊರಟ್ಟಿ ವಂದಿಸಿದರು.

ಅಪ್ಪಾಜಿ ಸಂಗೀತ ಕಲಾ ಬಳಗದ ವತಿಯಿಂದ ಸಂಗೀತಸೇವೆ ನೆರವೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.