ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಯ ಫಲವತ್ತತೆ ಉಳಿಸಿ: ನ್ಯಾಯಾಧೀಶ ಕೆ.ಎಸ್. ರೊಟ್ಟೇರ್

Published 23 ಏಪ್ರಿಲ್ 2024, 13:31 IST
Last Updated 23 ಏಪ್ರಿಲ್ 2024, 13:31 IST
ಅಕ್ಷರ ಗಾತ್ರ

ಹುಕ್ಕೇರಿ: ‘2024ರ ಭೂ ದಿನಾಚರಣೆ ಧ್ಯೇಯವಾಕ್ಯದಂತೆ ಭೂಮಿಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಎಲ್ಲರೂ ಪ್ರಯತ್ನಿಸಬೇಕು. ಭೂಮಿಯ ಫಲವತ್ತತೆ ಉಳಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಸ್. ರೊಟ್ಟೇರ್ ಹೇಳಿದರು.

ನಗರದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕೃಷಿ ಇಲಾಖೆ, ಕೃಷಿಕ ಸಮಾಜ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಸೋಮವಾರ ನಡೆದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿವಿಲ್ ನ್ಯಾಯಾಧೀಶ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಅಂಬಣ್ಣ ಕೆ. ಮಾತನಾಡಿ, ‘ಮನುಷ್ಯನ ದುರಾಸೆಯಿಂದ ಭೂಮಿ ಮೇಲಿನ ತಾಪಮಾನ  ಹೆಚ್ಚುತ್ತಿದ್ದು, ಇದು ಮನುಷ್ಯನಿಗೇ ಅಪಾಯ ತಂದೊಡ್ಡಿದೆ. ಈ ಸಮಸ್ಯೆ ಬಗೆಹರಿಸಲು ಎಲ್ಲರೂ ಕೈಜೋಡಿಸಬೇಕು’ ಎಂದರು.

ವಿಜ್ಞಾನಿ ಪರಶುರಾಮ ಪಾಟೀಲ ಮತ್ತು ವಕೀಲೆ ಲಾವಣ್ಯ ಸಂಸುದ್ದಿ ಉಪನ್ಯಾಸ ನೀಡಿದರು. ವಕೀಲ ರಾಮಚಂದ್ರ ಜೋಶಿ, ಎಡಿಎ ಆರ್.ಬಿ.ನಾಯ್ಕರ್ ಮಾತನಾಡಿದರು.

ಹುಕ್ಕೇರಿಯಲ್ಲಿ ಸೋಮವಾರ ಜರುಗಿದ ವಿಶ್ವ ಭೂ ದಿನಾಚರಣೆ ಅಂಗವಾಗಿ ಸಸಿಗೆ ನೀರುಣಿಸಿ ಹಿರಿಯ ನ್ಯಾಯಾಧೀಶರಾದ ಕೆ.ಎಸ್.ರೊಟ್ಟೇರ್ ಮತ್ತು ನ್ಯಾಯಾಧೀಶ ಅಂಬಣ್ಣ ಕೆ ಕಾರ್ಯಕ್ರಮ ಉದ್ಘಾಟಿಸಿದರು.
ಹುಕ್ಕೇರಿಯಲ್ಲಿ ಸೋಮವಾರ ಜರುಗಿದ ವಿಶ್ವ ಭೂ ದಿನಾಚರಣೆ ಅಂಗವಾಗಿ ಸಸಿಗೆ ನೀರುಣಿಸಿ ಹಿರಿಯ ನ್ಯಾಯಾಧೀಶರಾದ ಕೆ.ಎಸ್.ರೊಟ್ಟೇರ್ ಮತ್ತು ನ್ಯಾಯಾಧೀಶ ಅಂಬಣ್ಣ ಕೆ ಕಾರ್ಯಕ್ರಮ ಉದ್ಘಾಟಿಸಿದರು.

ಟಿಎಚ್ಒ ಉದಯ ಕುಡಚಿ, ಎಡಿಎಚ್ ತಾತ್ಯಾಸಾಬ ನಾಂದಣಿ, ನಿರ್ಮಲಾ ಕುರಬೇಟ, ಅನಿಲ್ ಕರೋಶಿ, ಎಪಿಪಿ ಶೇಖರ್ ಭಡಗಾಂವೆ, ವಕೀಲ ಸಂಘದ ಉಪಾಧ್ಯಕ್ಷ ಬಸವರಾಜ ಜಿನರಾಳಿ, ಕಾರ್ಯದರ್ಶಿ ಎಸ್.ಜಿ.ನದಾಫ್, ಜಂಟಿ ಕಾರ್ಯದರ್ಶಿ ವಿಠ್ಠಲ್ ಘಸ್ತಿ, ಖಜಾಂಚಿ ಅಂಬರೀಶ ಬಾಗೇವಾಡಿ, ಮಹಿಳಾ ಪ್ರತಿನಿಧಿ ಅನಿತಾ ಕುಲಕರ್ಣಿ, ವಕೀಲ ಎಸ್.ಎಸ್.ಜಿರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT