‘ಮಹಿಳೆಗೆ ಆಯ್ಕೆ ಸ್ವಾತಂತ್ರ್ಯ ಕೊಟ್ಟಿದ್ದ ಶರಣರು’

7
ಸಹಾಯಕ ಪ್ರಾಧ್ಯಾಪಕಿ ಮೈತ್ರೇಯಿಣಿ ಗದಿಗೆಪ್ಪಗೌಡರ

‘ಮಹಿಳೆಗೆ ಆಯ್ಕೆ ಸ್ವಾತಂತ್ರ್ಯ ಕೊಟ್ಟಿದ್ದ ಶರಣರು’

Published:
Updated:
Prajavani

ಬೆಳಗಾವಿ: ‘ಶರಣರು 12ನೇ ಶತಮಾನದಲ್ಲಿಯೇ ಸ್ತ್ರೀಯರಿಗೆ ಸಮಾನತೆ ನೀಡುವ ಮೂಲಕ, ಅವರ ಆತ್ಮಗೌರವ ಹೆಚ್ಚಿಸಿದರು. ಜಗತ್ತಿನಲ್ಲಿ ಪ್ರಥಮವಾಗಿ ಮಹಿಳೆಯರಿಗೆ ಆಯ್ಕೆ ಸ್ವಾತಂತ್ರ್ಯ ನೀಡುವುದರೊಂದಿಗೆ ಸ್ವಾಭಿಮಾನಿಗಳನ್ನಾಗಿಸಿದರು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕವು ಈಚೆಗೆ ಆಯೋಜಿಸಿದ್ದ ‘ಅಮಾವಾಸ್ಯೆ ಅನುಭಾವ ಗೋಷ್ಠಿ’ಯಲ್ಲಿ ‘ಶರಣೆಯರ ವಚನಗಳಲ್ಲಿ ಮಹಿಳಾ ಸಬಲೀಕರಣ ಚಿಂತನೆ’ ವಿಷಯ ಕುರಿತು ಮಾತನಾಡಿದರು.

‘ಇಂದು ಮಹಿಳೆ ಸಬಲೀಕರಣದತ್ತ ಹೆಜ್ಜೆ ಇಟ್ಟಿದ್ದಾಳೆ. ಇದಕ್ಕಿಂತಲೂ 12ನೇ ಶತಮಾನದಲ್ಲಿಯೇ ಸಮಾನವಾಗಿ ವಿಚಾರಿಸುವ ಸ್ವಾತಂತ್ರ್ಯ ಪಡೆದಿದ್ದಳು ಎನ್ನುವುದು ಮುಖ್ಯವಾಗುತ್ತದೆ. ಶರಣರು ಸ್ತ್ರೀಯರನ್ನು ವಿಚಾರಪತ್ನಿ ಎಂದು ಕರೆದರು. ಅವರ ಜ್ಞಾನವನ್ನು ಪುರಸ್ಕರಿಸಿದರು. ಹಲವಾರು ಕ್ಷೇತ್ರಗಳಲ್ಲಿ ಮುಕ್ತವಾಗಿ ತೊಡಗಿಸಿಕೊಂಡಿದ್ದ ಸ್ತ್ರೀ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮರ್ಥವಾಗಿ ಬಳೆಸಿಕೊಂಡಿದ್ದಳು. ತನ್ನ ಇಚ್ಛೆಯಂತೆ ಪಡೆಯುವ ಹಾಗೂ ಬದುಕುವ ಸ್ವಾವಲಂಬಿ ಜೀವನ ಅವಳದಾಗಿತ್ತು. ಇದಕ್ಕೆ ಅಕ್ಕಮಹಾದೇವಿ ಜೀವನ ಉದಾಹರಣೆಯಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಸ್. ಪಾಟೀಲ ಮಾತನಾಡಿ, ‘ಶರಣರು ಸ್ತ್ರೀಯರಿಗೆ ಸಮಾನತೆ ಕಲ್ಪಿಸಿದರು. ಸಮಾಜದ ಹಲವು ಸ್ತರಗಳಲ್ಲಿ ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡಿದರು. ಸಮಾಜದ ಸಂಘಟನೆಯಲ್ಲಿ ಮಹಿಳೆಯರ ಅಗತ್ಯತೆ ನದಟ್ಟು ಮಾಡಿದರು. ಇಂದು ಮಹಿಳೆಯರು ಸಾಕಷ್ಟು ಸಾಧನೆಯ ಶಿಖರಕ್ಕೇರಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡುವ ಮೂಲಕ ನವ ಸಮಾಜ ನಿರ್ಮಾಣ ಮಾಡಬೇಕಾಗಿದೆ’ ಎಂದರು.

ಮುಖಂಡರಾದ ಕಲ್ಯಾಣರಾವ್ ಮುಚಳಂಬಿ, ಸೋಮಲಿಂಗ ಮಾವಿನಕಟ್ಟಿ ಇದ್ದರು.

ಪರಶುರಾಮ ಯಲ್ಲಪ್ಪ ವಾಜಂತ್ರಿ ಟ್ರಂಪೆಟ್ ಸಂಗೀತ ಪ್ರಸ್ತುತಪಡಿಸಿದರು. ರಾಜೇಶ್ವರಿ ಹಿರೇಮಠ, ಬೆಳ್ಳಿಚುಕ್ಕಿ ಸಾಂಸ್ಕೃತಿಕ ಅಕಾಡೆಮಿ ಸದಸ್ಯರು ಹಾಗೂ ಶಂಕರ ಚೊಣ್ಣದ ಪ್ರಾರ್ಥಿಸಿದರು. ಜ್ಯೋತಿ ಭಾವಿಕಟ್ಟಿ ಸ್ವಾಗತಿಸಿದರು. ಮಹೇಶ ಗುರನಗೌಡರ ನಿರೂಪಿಸಿದರು. ಗುರುದೇವಿ ಹುಲೆಪ್ಪನವರಮಠ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !