ಹುಕ್ಕೇರಿ: ಪಟ್ಟಣದ ಬಜಾರ್ ರಸ್ತೆಯಲ್ಲಿನ ಲಕ್ಷ್ಮೀ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸೈಟಿಗೆ ಐದು ವರ್ಷ ಅವಧಿಗೆ ಅಧ್ಯಕ್ಷರಾಗಿ ಶಿವಾನಂದ ಪಟ್ಟಣಶೆಟ್ಟಿ ಮತ್ತು ಉಪಾಧ್ಯಕ್ಷರಾಗಿ ಶಿವನಗೌಡ ಮದವಾಲ್ ಅವಿರೋಧವಾಗಿ ಆಯ್ಕೆಯಾದರು.
ಹಿರಾ ಶುಗರ್ಸ್ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ ಹಾಗೂ ಮಹಾವೀರ ಸಮೂಹ ಸಂಸ್ಥೆಯ ಅಧ್ಯಕ್ಷ, ಪುರಸಭೆ ಸದಸ್ಯ ಮಹಾವೀರ ನಿಲಜಗಿ ಅವರ ಮಾರ್ಗದರ್ಶನದಲ್ಲಿ ಸಹಕಾರಿ ಸಂಘದ ಸಭಾಭವನದಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಡಳಿತ ಮಂಡಳಿ ಅವರನ್ನು ಸತ್ಕರಿಸಲಾಯಿತು.
ನಿರ್ದೇಶಕರಾದ ಸುನೀಲ್ ನಾಯಿಕ, ಕೆಂಪಣ್ಣ ಪಾಟೀಲ, ಪರಪ್ಪ ಚೌಗಲಾ, ಶಿವಾಜಿ ಬಾರಿಗಿಡದ, ಸತಿಗೌಡ ಕಲ್ಲಟ್ಟಿ, ಕೆಂಪಣ್ಣ ಹೂಗಾರ ರಾಜೇಂದ್ರ ಕೊರ್ತಿ, ಮುಕುಂದ ಮಠದ, ರಾಜು ಗಸ್ತಿ, ಪದ್ಮಾ ನಿಲಜಗಿ, ಮಹಾದೇವಿ ಸಂಬಾಳ, ಮುಖಂಡರಾದ ಸಂಜಯ ನಿಲಜಗಿ, ಕೆ.ಐ. ಸಂಬಾಳ, ವ್ಯವಸ್ಥಾಪಕ ರಮೇಶಕುಮಾರ ಚಿಗರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.