ಜಿಲ್ಲಾ ಪಂಚಾಯ್ತಿ ಚಾವಣಿಯಲ್ಲಿ 6431 ಯುನಿಟ್‌ ವಿದ್ಯುತ್ ಉತ್ಪಾದನೆ

7

ಜಿಲ್ಲಾ ಪಂಚಾಯ್ತಿ ಚಾವಣಿಯಲ್ಲಿ 6431 ಯುನಿಟ್‌ ವಿದ್ಯುತ್ ಉತ್ಪಾದನೆ

Published:
Updated:
ಬೆಳಗಾವಿಯ ಜಿಲ್ಲಾ ಪಂಚಾಯ್ತಿ ಕಟ್ಟಡದ ಚಾವಣಿಯಲ್ಲಿ ಅಳವಡಿಸಿರುವ ಸೌರವಿದ್ಯುತ್ ಘಟಕವನ್ನು ಸಿಇಒ ಆರ್. ರಾಮಚಂದ್ರನ್ ಶುಕ್ರವಾರ ವೀಕ್ಷಿಸಿದರು

ಬೆಳಗಾವಿ: ಸೌರ ವಿದ್ಯುತ್‌ ಅನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವ ಇಲ್ಲಿನ ಜಿಲ್ಲಾ ‍‍ಪಂಚಾಯ್ತಿಯು, ವಿದ್ಯುತ್‌ ಸ್ವಾವಲಂಬನೆಯತ್ತ ಸಾಗುತ್ತಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ, ನವೀಕರಿಸಬಹುದಾದ ಇಂಧನ ಯೋಜನೆಯಡಿ ಸೌರ ವಿದ್ಯುತ್ ಹಾಗೂ ಪವನ ಶಕ್ತಿ ಮೂಲಕ 2020ರ ಅಂತ್ಯಕ್ಕೆ ದೇಶದ ಶೇ 20ರಷ್ಟು ಸೌರ ವಿದ್ಯುತ್‌ ಉತ್ಪಾದನೆಯ ಗುರಿ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಪ್ರಥಮ ಹಂತದಲ್ಲಿ ಸಮಗ್ರ ಇಂಧನ ಅಭಿವೃದ್ಧಿ ಯೋಜನೆಯಡಿ 10 ಕಿ.ವಾಟ್‌ ಸಾಮರ್ಥ್ಯದ ಸೌರ ವಿದ್ಯುತ್ ಘಟಕವನ್ನು ಜಿಲ್ಲಾ ಪಂಚಾಯ್ತಿ ಕಾರ್ಯಾಲಯದ ಚಾವಣಿಯಲ್ಲಿ ಇದೇ ವರ್ಷದ ಜನವರಿಯಲ್ಲಿ ಅಳವಡಿಸಲಾಗಿದೆ.

5 ತಿಂಗಳಲ್ಲಿ, ಇಲ್ಲಿನ ಸೌರ ವಿದ್ಯುತ್ ಫಲಕಗಳಿಂದ 6431 ಯುನಿಟ್ ವಿದ್ಯುತ್ ಉತ್ಪಾದನೆಯಾಗಿ 5718  ಯುನಿಟ್ ವಿದ್ಯುತನ್ನು ಜಿಲ್ಲಾ ಪಂಚಾಯ್ತಿ ಕಾರ್ಯಾಲಯವು ಉಪಯೋಗಿಸಿದೆ. ಹೆಚ್ಚುವರಿಯಾದ 713 ಯುನಿಟ್ ವಿದ್ಯುತನ್ನು ಹೆಸ್ಕಾಂ ವಿದ್ಯುತ್ ಜಾಲಕ್ಕೆ ನೀಡಲಾಗಿದೆ. ಇದರಿಂದ ಜಿಲ್ಲಾ ಪಂಚಾಯ್ತಿಗೆ ಈವರೆಗೆ ₹ 51,700 ಉಳಿತಾಯವಾಗಿದೆ. ಸೌರ ಘಟಕ ಅಳವಡಿಕೆಗೆ ₹ 8.10 ಲಕ್ಷ ಅನುದಾನ ವಿನಿಯೋಗಿಸಲಾಗಿದೆ.

2ನೇ ಹಂತದಲ್ಲಿ 30 ಕಿ.ವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಅಳವಡಿಸುವ ಕುರಿತು ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಶೀಘ್ರವೇ ಯೋಜನೆ ಅನುಷ್ಠಾನ ಮಾಡಲಾಗುವುದು. ಇದರೊಂದಿಗೆ ಜಿಲ್ಲಾ ಪಂಚಾಯ್ತಿಯು ಪೂರ್ಣ ಪ್ರಮಾಣದ ವಿದ್ಯುತ್ ಸ್ವಾವಲಂಬನೆ ಹೊಂದಲಿದೆ ಎಂದು ಸಿಇಒ ಆರ್. ರಾಮಚಂದ್ರನ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !