ಸೋಮವಾರ, ಮಾರ್ಚ್ 27, 2023
21 °C

ಬೆಳಗಾವಿಗೂ ಬಂತು ‘ಸ್ಪುಟ್ನಿಕ್’ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೋವಿಡ್ ಸಾಂಕ್ರಾಮಿಕದ ಎರಡು ಅಲೆಗಳಿಂದ ಜನತೆಗೆ ಸಾಕಷ್ಟು ತೊಂದರೆಯಾಗಿದೆ. ಇಡೀ ಮನುಕುಲವೇ ನಲುಗಿ ಹೋಗಿದೆ. ಈ ವೈರಾಣು ವಿರುದ್ಧ ಹೋರಾಡಲು ಲಸಿಕೆಯೊಂದೇ ಅಸ್ತ್ರವಾಗಿದ್ದು, ಎಲ್ಲರೂ ಪಡೆದುಕೊಳ್ಳಬೇಕು’ ಎಂದು ಟಿಎಚ್‌ಒ ಡಾ.ಶಿವಾನಂದ ಮಾಸ್ತಿಹೊಳಿ ಸಲಹೆ ನೀಡಿದರು.

ಇಲ್ಲಿನ ಶಾಸ್ತ್ರಿ ನಗರದ ಅಪೂರ್ವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ‘ಸ್ಪುಟ್ನಿಕ್’ ಕೋವಿಡ್ ಲಸಿಕೆಯನ್ನು ಬುಧವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಕೋವ್ಯಾಕ್ಸಿನ್, ಕೋವಿಶೀಲ್ಡ್‌ ಜೊತೆಗೆ ಸ್ಪುಟ್ನಿಕ್ ಲಸಿಕೆಗಳು ಕೂಡ ಈಗ ಜನರಿಗೆ ಲಭ್ಯ ಇವೆ.  ಉತ್ತರ ಕರ್ನಾಟಕದಲ್ಲಿ ಹುಬ್ಬಳ್ಳಿ, ವಿಜಯಪುರ ಬಳಿಕ ಬೆಳಗಾವಿಯಲ್ಲಿ ಪ್ರಥಮ ಬಾರಿಗೆ ಸ್ಪುಟ್ನಿಕ್ ಲಸಿಕೆಯು ಅಪೂರ್ವ ಆಸ್ಪತ್ರೆಯಲ್ಲಿ ಲಭ್ಯವಾಗಿದೆ’ ಎಂದರು.

‘ಕೊವಿಡ್ 2ನೇ ಅಲೆಯ ಸಂಕಷ್ಟದ ಸಮಯದಲ್ಲಿ ಅಪೂರ್ವ ಆಸ್ಪತ್ರೆ ಎಂ.ಡಿ. ಶಿವಾನಂದ ಹಳಿಗೌಡ್ರ ಹಾಗೂ ಇಡೀ ಆಸ್ಪತ್ರೆ ಸೇವೆ ಶ್ಲಾಘನೀಯವಾಗಿದೆ. ಸೆ.17ರಂದು ಲಸಿಕೆ ಅಭಿಯಾನ ಏರ್ಪಡಿಸಲಾಗಿದೆ. ಎಲ್ಲ ಆಸ್ಪತ್ರೆಗಳು ಇದಕ್ಕೆ ಕೈಜೋಡಿಸಬೇಕು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಡಾ.ಶ್ರೀಕಾಂತ ಮೈತ್ರಿ ಮಾತನಾಡಿ, ‘ಸ್ಪುಟ್ನಿಕ್‌ ಲಸಿಕೆಯು ಉಳಿದ ಎಲ್ಲ ಲಸಿಕೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಪಡೆದ 21 ದಿನಗಳಲ್ಲಿ ದೇಹದಲ್ಲಿ ಶೇ. 99ರಷ್ಟು ಪ್ರತಿಕಾಯ ಶಕ್ತಿ ಬಲವರ್ಧನೆ ಆಗುತ್ತದೆ. ಇಡೀ ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ ಅಡ್ಡಪರಿಣಾಮಗಳು ವರದಿ ಆಗಿರುವುದು ಸ್ಪುಟ್ನಿಕ್ ಲಸಿಕೆಯ ವಿಶೇಷತೆಯಾಗಿದೆ’ ಎಂದು ಹೇಳಿದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ ಹಳಿಗೌಡ್ರ, ಡಾ.ಆನಂದ ತೋಟಗಿ, ಡಾ.ಅಮಿತ, ಡಾ.ಶ್ರೀಶೈಲ ಹನಗಂಡಿ, ಡಾ.ಸುಧೀರ ಭಟ್, ಡಾ.ಸದಾನಂದ ಎನ್. ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು