ಶನಿವಾರ, ಏಪ್ರಿಲ್ 10, 2021
29 °C

ಸಿಇಒ, ಪೊಲೀಸ್ ಅಧಿಕಾರಿ ಮನೆಯಲ್ಲೇ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಜಾಧವನಗರದಲ್ಲಿರುವ ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಸಿಇಒ ಗಂಗೂಬಾಯಿ ಮಾನಕರ ಹಾಗೂ ಹನುಮಾನ್‌ ನಗರ ಟಿವಿ ಸೆಂಟರ್‌ನಲ್ಲಿರುವ ಪೊಲೀಸ್ ಅಧಿಕಾರಿ ಅಡಿವೆಪ್ಪ ಬೂದಿಗೊಪ್ಪ ಅವರ ಮನೆಯಲ್ಲಿ ಸೋಮವಾರ ಕಳವು ನಡೆದಿದೆ.

ಮನೆಯ ಬಾಗಿಲಿನ ಬೀಗ ಮುರಿದು ಟಿವಿ, ಬಟ್ಟೆ ಮೊದಲಾದ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ. ಪೊಲೀಸ್ ಅಧಿಕಾರಿ ಮನೆಯಲ್ಲಿ ಕಳವಿಗೆ ಯತ್ನ ನಡೆದಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ, ಈ ಕುರಿತು ದೂರು ದಾಖಲಾಗಿಲ್ಲ.

9 ಕೆ.ಜಿ. ಬೆಳ್ಳಿ ಆಭರಣ ವಶ

ಬೆಳಗಾವಿ ತಾಲ್ಲೂಕಿನ ಮುತಗಾ ಬಳಿ ದಾಖಲೆ ಇಲ್ಲದೇ ಸಾಗಿಸುತ್ಯಿದ್ದ 9 ಕೆ.ಜಿ. 246 ಗ್ರಾಂ. ಬೆಳ್ಳಿ ಆಭರಣಗಳನ್ನು ಮಾರಿಹಾಳ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ.

ಶಹಾಪುರದ ಕೋರೆ ಗಲ್ಲಿಯ ವಸೀಂ ಮುತವಾಲೆ (29), ಕೋಟೆ ರಸ್ತೆಯ ಅತ್ತಾವುಲ್ಲಾ ಮುಜಾವರ (26) ಹಾಗೂ ಲಕ್ಷ್ಮಿನಗರದ ಮುಜಮಿಲ್ ಸನದಿ (22) ಬಂಧಿತರು. ರಾಮದುರ್ಗದ ಕಡೆಯಿಂದ ಬರುತ್ತಿದ್ದಾಗ ಅವರ ವಾಹನವನ್ನು ಪೊಲೀಸರು ತಪಾಸಣೆ ನಡೆಸಿದಾಗ, ಬೆಳ್ಳಿ ಆಭರಣಗಳು ಪತ್ತೆಯಾದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು