ಬುಧವಾರ, ಏಪ್ರಿಲ್ 14, 2021
31 °C
ಕಾಲೇಜು ಜಿಮ್ಖಾನಾ ಚಟುವಟಿಕೆ ಉದ್ಘಾಟನೆ

ಕ್ರೀಡೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ: ಜಗದೀಶ ಗಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯ ರಕ್ಷಣೆ ಸುಲಭ ಸಾಧ್ಯವಾಗುತ್ತದೆ. ಮುಂದಿನ ಜೀವನದ ಸವಾಲುಗಳನ್ನು ಎದುರಿಸುವುದು ಸರಳವಾಗುತ್ತದೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕ್ರೀಡಾ ಶಿಕ್ಷಣ ನಿರ್ದೇಶಕ ಜಗದೀಶ ಗಸ್ತಿ ತಿಳಿಸಿದರು.

ನಗರದ ಕರ್ನಾಟಕ ಕಾನೂನು ಸಮಿತಿಯ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಈಚೆಗೆ ನಡೆದ ಜಿಮ್ಖಾನಾ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ಎಲ್ಲರೂ ಮಾನಸಿಕ ಒತ್ತಡ ಅನುಭವಿಸುತ್ತಿದ್ದಾರೆ. ಈ ರೀತಿಯ ಒತ್ತಡದ ನಡುವೆಯೂ ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಿಸಿಕೊಳ್ಳುವುದು ಮುಖ್ಯ. ಅತ್ಯಂತ ಒತ್ತಡದ ದಿನಗಳಲ್ಲೂ ಮಾನಸಿಕ ಸಮತೋಲನ ಕಳೆದುಕೊಳ್ಳದೆ ಇರುವುದು ಮುಖ್ಯವಾಗುತ್ತದೆ. ಜೀವನದಲ್ಲಿ ಯಾವುದೇ ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ ಬೇಕಾಗುತ್ತದೆ. ಜೊತೆಗೆ ಸೋಲು–ಗೆಲುವುಗಳನ್ನು ಸಮಚಿತ್ತದಿಂದ ನೀಡಬೇಕು. ಆ ಮನೋಭಾವವನ್ನು ಕ್ರೀಡೆ ಕಲಿಸಿಕೊಡುತ್ತದೆ’ ಎಂದು ಹೇಳಿದರು.

ಪ್ರಾಂಶುಪಾಲ ಡಾ.ಎ.ಎಚ್. ಹವಾಲ್ದಾರ ಮಾತನಾಡಿ, ‘ವರ್ಷವಿಡೀ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗುವುದು. ಅದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಪ್ರತಿಭೆ ಪ್ರದರ್ಶಿಸಬೇಕು’ ಎಂದು ಸಲಹೆ ನೀಡಿದರು.

ಪ್ರಧಾನ ಕಾರ್ಯದರ್ಶಿಯಾಗಿ ಶ್ರೇಯಾ ಉತ್ತುರೆ, ಮಹಿಳಾ ಪ್ರತಿನಿಧಿ-ಪೂಜಾ ಬಾಡಕುಂದರಿ, ಸಂಗೀತ ಸಮಿತಿ ಕಾರ್ಯದರ್ಶಿ– ವೈಷ್ಣವಿ ವಿಭೂತಿ, ಮಾಧ್ಯಮ ಕಾರ್ಯದರ್ಶಿ- ನಿವೇದಿತಾ ದೀಕ್ಷಿತ್, ಹೊರಾಂಗಣ ಕ್ರೀಡೆ- ಹಯ್ಯಾಳಪ್ಪ, ಕ್ಷಮಾ ಭಟ್ - ವೈವಿಧ್ಯ, ವೈಷ್ಣವಿ ಕುಲಕರ್ಣಿ - ಕ್ರೀಡೆ (ಒಳಾಂಗಣ), ಸಮೀಕ್ಷಾ ಮಹಾದಿಕ - ಪ್ರಸಾರಾಂಗ , ರೋಹಿತ್ ಲಾತೂರ- ಅಣುಕು ನ್ಯಾಯಾಲಯ, ಮಾನಸಿ ಜಿಗಜಿನ್ನಿ - ಚರ್ಚಾ ಸ್ಪರ್ಧೆ ಸಮಿತಿ, ಪ್ರಿಯಾಂಕಾ ರಾಠಿ - ಕಾರ್ಯಾಗಾರ ಹಾಗೂ ವಿಚಾರ ಗೋಷ್ಠಿ, ರುಚಾ ಆಷ್ಟ ಪುತ್ರೆ - ಪ್ರವಾಸ ಹಾಗೂ ವಿಹಾರ, ಖುಷಿ ಕಠಾರಿಯ- ಅಭ್ಯಾಸ ಕೊಠಡಿ ಕಾರ್ಯದರ್ಶಿಗಳಾಗಿ  ಪ್ರಮಾಣವಚನ ಸ್ವೀಕರಿಸಿದರು. ಪ್ರೊ.ಅಮಿತ್ ಜಾಧವ ಪ್ರಮಾಣವಚನ ಬೋಧಿಸಿದರು.

ಪ್ರೊ.ಪಿ.ಎ. ಯಜುರ್ವೇದಿ ಸ್ವಾಗತಿಸಿದರು. ಪೂಜಾ ಬಡಕುಂದ್ರಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು